ಬಾಗಲಕೋಟೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ನುಡಿದಂತೆ ನಡೆಯದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಷ್ಟು ಮಹಾಮೋಸಗಾರ ಯಾರೂ ಇಲ್ಲ. ಹೊಸಪೇಟೆಯಿಂದ ಕೂಡಲಸಂಗಮವರೆಗೆ ಪಾದಯಾತ್ರೆ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುತ್ತೇನೆ ಎಂದಿದ್ದರು. ಅಧಿಕಾರ ಬಂದ ಮೇಲೆ ಏನೂ ಮಾಡಲಿಲ್ಲ. ಈ ಬಾರಿಯೂ ಪ್ರತಿ ವರ್ಷ ₹40 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದರು. ಈಗಲೂ ನೀಡಲಿಲ್ಲ ಎಂದು ಟೀಕಿಸಿದರು.

2014–15ರಲ್ಲಿ ಘೋಷಣೆ ಮಾಡಿದ್ದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಚುನಾವಣೆ ಬಂದಿದೆ ಎಂದು ಈಗ ಶಂಕುಸ್ಥಾಪನೆ ಮಾಡಲಾಗಿದೆ. ಅವರಿಗೆ ಬದ್ಧತೆ ಇದ್ದರೆ, ಇಷ್ಟೊತ್ತಿಗೆ ಉದ್ಘಾಟನೆಯಾಗಬೇಕಿತ್ತು. ಇದೊಂದು ಚುನಾವಣೆ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕಿತ್ತು. ಆದರೆ, ಈ ವಿಷಯವಲ್ಲಿ ಕೋರ್ಟ್ನಲ್ಲಿ ವಾದ ಮಾಡದೇ ತಡೆಯಾಜ್ಞೆ ಸಿಗುವಂತೆ ಸರ್ಕಾರ ನೋಡಿಕೊಂಡಿತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿಯೇ ಮುಳುಗಿದ್ದಾರೆ. ಸಿ.ಎಂ ಅವರದು ಒಂದು ಗುಂಪಾದರೆ, ಡಿಸಿಎಂ ಅವರದ್ದು ಮತ್ತೊಂದು ಗುಂಪು, ಪರಮೇಶ್ವರ, ಮುನಿಯಪ್ಪನವರದ್ದೂ ಮಗದೊಂದು ಗುಂಪಾಗಿದೆ ಎಂದು ಟೀಕಿಸಿದರು.

ನವನಗರದ ಅಭಿವೃದ್ಧಿಗೆ ವೀರಣ್ಣ ಚರಂತಿಮಠ ₹3 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಮೂರು ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ. ಬಾಗಲಕೋಟೆ ಜನರಿಗೆ ಕಾಂಗ್ರೆಸ್ ಗೆಲ್ಲಿಸಿ ಮೋಸ ಹೋಗಿರುವುದು ಅರಿವಾಗಿದೆ. ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ಸಣ್ಣಪುಟ್ಟ ಕಾರಣಗಳಿಗೆ ಪಕ್ಷ ಬಿಟ್ಟವರು, ಮನೆಯಲ್ಲಿ ಕುಳಿತವರು ಮತ್ತೇ ಪಕ್ಷಕ್ಕೆ ಬಂದು ಬಲ ತುಂಬುವಂತೆ ವಿನಂತಿ ಮಾಡಲಾಗುವುದು ಎಂದು ಹೇಳಿದರು.

ಚುನಾವಣಾ ಉಸ್ತುವಾರಿ ಅರುಣ ಶಹಾಪುರ ಮಾತನಾಡಿ, ಅನಿವಾರ್ಯ ಕಾರಣಗಳಿಂದ ಪಕ್ಷ ಬಿಟ್ಟು ಹೋದವರನ್ನು ಮತ್ತೇ ಪಕ್ಷಕ್ಕೆ ತರುವ ಕೆಲಸವನ್ನು ಮಾಡಲಾಗುತ್ತಿದೆ. ಕಟ್ಟಿ ಕಲ್ಲನ್ನು ಕಟ್ಟಿಗೆ ಹೊಂದಿಸಲಾಗುತ್ತಿದೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-19-760145656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.