ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಪರಿಹಾರ ನಿಧಿಗೆ ₹ 10 ಲಕ್ಷ ದೇಣಿಗೆ: ಎಸ್.ಅರ್.ಪಾಟೀಲ

Last Updated 1 ಏಪ್ರಿಲ್ 2020, 6:20 IST
ಅಕ್ಷರ ಗಾತ್ರ

ಬಾಗಲಕೋಟೆ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೀಳಗಿಯ ತಮ್ಮ ಎಸ್.ಆರ್.ಪಾಟೀಲ ಸಮೂಹ ಸಂಸ್ಥೆಗಳ ವತಿಯಿಂದ ₹10 ಲಕ್ಷ ದೇಣಿಗೆ ನೀಡಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್ ಜಮಾತ್ ಗೆ ಹೋದವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅಲ್ಲಿ ಪಾಲ್ಗೊಂಡರಲ್ಲಿ ಸೋಂಕು ಮೂನ್ನೂರರ ಗಡಿ ದಾಟಿದೆ ಎಂಬ ಮಾಹಿತಿ ಇದೆ.

ಜನರು ಸಹ ಸ್ವಯಂ ಪ್ರೇರಿತವಾಗಿ ನಿಭ೯ಂಧ ಹಾಕಿಕೊಳ್ಳಬೇಕು.ಇಡೀ ಸಮುದಾಯಕ್ಕೆ ಹರಡುವ ಸಾಧ್ಯತೆಯಿದೆ..ಮೂರನೇ ಹಂತಕ್ಕೆ ಬಂದರೆ ಬಹಳ ತೊಂದರೆ ಆಗಲಿದೆ.

ಸರ್ಕಾರ ಕೂಡಾ ಚುರುಕಾಗಿ ಕೆಲಸ ಮಾಡಬೇಕು..ನಿಜಾಮುದ್ದೀನ್ ಜಮಾತ್ ನಲ್ಲಿ ಭಾಗವಹಿಸಿದ ಇನ್ನೂ ನಾಲ್ಕು ಸಾವಿರ ಜನರನ್ನು ಪತ್ತೆ ಮಾಡಬೇಕು. ಒಬ್ಬರನ್ನು ಬಿಡದೇ ಅವರನ್ನೆಲ್ಲಾ ಕ್ವಾರೆಂಟೆನ್ಸ್ ಗೆ ಒಳಪಡಿಸಬೇಕು..

ಇದು ತ್ವರಿತವಾಗಿ ಕಾರ್ಯ ನಡೆಯಬೇಕು, ತಡವಾದಷ್ಟು ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT