ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಬಾಲಕಿ ಸೇರಿದಂತೆ ಮತ್ತೆ ಐವರಿಗೆ ಸೋಂಕು

Last Updated 19 ಮೇ 2020, 12:49 IST
ಅಕ್ಷರ ಗಾತ್ರ

ಬಾಗಲಕೋಟೆ: 11 ವರ್ಷದ ಬಾಲಕಿ ಸೇರಿದಂತೆ ಐವರಿಗೆ ಮಂಗಳವಾರ ಹೊಸದಾಗಿ ಕೋವಿಡ್–19 ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 607 ಅವರ ಸಂಪರ್ಕಕ್ಕೆ ಬಂದ ಬಾಲಕಿ, ಮೂವರು ಪುರುಷರಿಗೆ ಸೊಂಕು ತಲುಪಿದೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದ 38 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 76ಕ್ಕೆ ಹೆಚ್ಚಳಗೊಂಡಿದೆ. ಇವರ ಪೈಕಿ 31 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ.

ಹೊಸ ಸೋಂಕಿತರ ಪೈಕಿ ನಾಲ್ವರು ಬಾದಾಮಿ ತಾಲ್ಲೂಕಿನ ಢಾಣಕಶಿರೂರಿನ ನಿವಾಸಿಗಳು. ಗ್ರಾಮದ ಉಳಿದ 97 ಮಂದಿಯೊಂದಿಗೆ 14 ದಿನಗಳ ಕಾಲ ಕ್ವಾರೆಂಟೈನ್‌ನಲ್ಲಿ ಇದ್ದರು. ಅವಧಿ ಮುಗಿದ ಕಾರಣ ಎಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರ ಪೈಕಿ ನಾಲ್ವರಿಗೆ ಸೋಂಕು ಪಾಸಿಟಿವ್ ಬಂದಿದೆ. ಉಳಿದವರಿಗೆ ನೆಗೆಟಿವ್ ಆಗಿದೆ.

ಕೊಲ್ಲಾಪುರದಿಂದ ಮುಚಖಂಡಿ ತಾಂಡಾಗೆ ಬಂದಿದ್ದ ವ್ಯಕ್ತಿಗೆ ಕೋವಿಡ್–19 ದೃಢಪಟ್ಟಿದೆ. ಹೊರ ರಾಜ್ಯದಿಂದ ಬಂದ ಕಾರಣ ಅವರು ಕುಟುಂಬದವರ ಸಂ‍ಪರ್ಕಕ್ಕೆ ಬಂದಿರಲಿಲ್ಲ. ಆದರೆ ಅವರನ್ನು ಬೈಕ್‌ನಲ್ಲಿ ಆಸ್ಪ‍ತ್ರೆಗೆ ಕರೆತಂದ ವ್ಯಕ್ತಿ ಹಾಗೂ ಅವರ ಕುಟುಂಬದ ನಾಲ್ವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT