ಶನಿವಾರ, ಜುಲೈ 24, 2021
22 °C

ಬಾಗಲಕೋಟೆ | ಮುಧೋಳದ ಮತ್ತಿಬ್ಬರಿಗೆ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಎರಡು ವರ್ಷದ ಹೆಣ್ಣು ಮಗು ಸೇರಿದಂತೆ ಮುಧೋಳ ನಗರದ ಇಬ್ಬರಿಗೆ ಕೋವಿಡ್–19 ಸೋಂಕು ಸೋಮವಾರ ದೃಢಪಟ್ಟಿದೆ. 

ಕಳೆದ 10 ದಿನಗಳಿಂದ ಒಂದೂ ಸೋಂಕು ದೃಢಪಡದ ಕಾರಣ ಜಿಲ್ಲೆಯ ಜನರು ನಿರಾಳವಾಗಿದ್ದರು. ಈಗ ಸೋಂಕಿನ ಸರಪಳಿ ಮುಂದುವರೆದಿದೆ.

ಮುಧೋಳದಲ್ಲಿ ಈ ಹಿಂದೆ ಕೋವಿಡ್–19 ದೃಢಪಟ್ಟಿದ್ದ ಮಹಿಳೆಯ ಎರಡು ವರ್ಷದ ಮಗಳು ಹಾಗೂ 28 ವರ್ಷದ ಪತಿಗೆ ಸೋಂಕು ಹೊಸದಾಗಿ ದೃಢಪಟ್ಟಿದೆ. ಅವರನ್ನು ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಅವರಲ್ಲಿ 69 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. ಒಟ್ಟು 9 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು