ಮಂಗಳವಾರ, ಏಪ್ರಿಲ್ 7, 2020
19 °C
ಜಿಲ್ಲೆಯಲ್ಲಿ 165 ಮಂದಿಯ ಮೇಲೆ ನಿಗಾ: ಲಾಠಿ ಪ್ರಹಾರ ಅಬಾಧಿತ

9 ಗಂಟಲು ದ್ರವ ಮಾದರಿಯೂ ನೆಗೆಟಿವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಶಂಕಿತ ಕೋವಿಡ್ 19 ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದೆ. ಎಲ್ಲಾ 9 ಗಂಟಲು ದ್ರವ ಮಾದರಿಗಳು ನೆಗೆಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಆರ್.ರಾಜೇಂದ್ರ ತಿಳಿಸಿದ್ದಾರೆ.

ಈ ಮೊದಲು ಕಳುಹಿಸಿದ್ದ ಐದು ಮಾದರಿಗಳು ನೆಗೆಟಿವ್ ಬಂದಿದ್ದವು. ಹೊಸದಾಗಿ ನಾಲ್ಕು ಮಾದರಿಗಳನ್ನು ಬುಧವಾರ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಎಲ್ಲವೂ ನೆಗೆಟಿವ್ ಫಲಿತಾಂಶ ಬಂದಿದೆ. ಎಲ್ಲರನ್ನೂ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. 

ವಿದೇಶದಿಂದ ಮರಳಿದವರು ಸೇರಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 165 ಮಂದಿಯನ್ನು ಮನೆ ಹಾಗೂ ಆಸ್ಪತ್ರೆಯಲ್ಲಿ 14 ದಿನಗಳ ಕ್ವಾರೆಂಟೈನ್‌ನಲ್ಲಿ (ನಿಗಾ) ಇಡಲಾಗಿದೆ. ಅವರಲ್ಲಿ 55 ಮಂದಿ ನಿರೀಕ್ಷಣಾ ಅವಧಿ ಪೂರ್ಣಗೊಳಿಸಿದ್ದಾರೆ. ಆರೋಗ್ಯವಾಗಿದ್ದಾರೆ.

ಲಾಠಿ ರುಚಿ!

ಸರ್ಕಾರದ ಆದೇಶದನ್ವಯ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದ್ದರೂ ಅನಗತ್ಯವಾಗಿ ಬೈಕ್ ನಲ್ಲಿ ಹೊರಗಡೆ ಓಡಾಡುತ್ತಿದ್ದವರಿಗೆ ಗುರುವಾರ ಕೂಡ ಪೊಲೀಸರು ಲಾಠಿ ರುಚಿ ತೋರಿಸಿದರು.

ದಿನಸಿ ಕೊಳ್ಳಲು ಅವಕಾಶ

ಮುಂಜಾನೆ ಕೆಲ ಹೊತ್ತು ಸಾರ್ವಜನಿಕರು ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ನಗರದ ಕಿರಾಣಿ ಅಂಗಡಿ ಹಾಗೂ ಸೂಪರ್‌ ಮಾರ್ಕೆಟ್‌ಗಳ ಎದುರು ಜನರು ಸಾಲುಗಟ್ಟಿದರು. ತರಕಾರಿ–ಹಣ್ಣಿನ ವ್ಯಾಪಾರವೂ ಜೊರಾಗಿ ನಡೆಯಿತು. ಅಂಗಡಿಗಳ ಮುಂದೆ ಹಾಕಲಾಗಿದ್ದ ಮಾರ್ಕಿಂಗ್‌ ಮೇಲೆ ನಿಂತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡರು. ಕೆಲವೆಡೆ ಅಂಗಡಿ ಮಾಲೀಕರು ಹಾಗೂ ‍ಪೊಲೀಸರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ನಿಗದಿತ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು