ಬಾಗಲಕೋಟೆ: ಬೆಳೆ ಬೆಳೆಯದೇ ಅಥವಾ ಜಮೀನಿನಲ್ಲಿ ಕಡಿಮೆ ಬೆಳೆ ಇದ್ದರೂ ಹೆಚ್ಚಿನ ಕ್ಷೇತ್ರ ತೋರಿಸಿ ಸರ್ಕಾರಕ್ಕೆ ₹30 ಕೋಟಿ ವಂಚಿಸಿದ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಂಚನೆಯ ವ್ಯಾಪ್ತಿಯು ಮುಧೋಳ ಅಲ್ಲದೇ ಬೀಳಗಿ, ಹುನಗುಂದ ತಾಲ್ಲೂಕಿನಲ್ಲೂ ವ್ಯಾಪಿಸಿದೆ. ಈ ಕಾರಣ ಪೊಲೀಸ್ ಇಲಾಖೆಯು ವಿಶೇಷ ತನಿಖಾ ತಂಡ ರಚಿಸಿದೆ.

2020 ರಿಂದ 2024ರವರೆಗೆ ರಾಜ್ಯ ಸರ್ಕಾರಕ್ಕೆ ₹30 ಕೋಟಿಗೂ ಹೆಚ್ಚು ವಂಚನೆ ಮಾಡಲಾಗಿದೆ. ವಿಮಾ ಕಂಪನಿಯ ನಾಲ್ವರು ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಧೋಳ ತಾಲ್ಲೂಕಿನ ಮೆಟಗುಡ್ಡ ಗ್ರಾಮದ ಕಲ್ಲಪ್ಪ ಹುಣಸಿಕಟ್ಟಿ, ಶ್ರೀನಿವಾಸ ಪಾಟೀಲ, ಕಲ್ಮೇಶ ಜುನ್ನೂರ, ಶ್ರೀನಿವಾಸ ಹುಣಸಿಕಟ್ಟಿ, ರಮೇಶ ಹುಣಸಿಕಟ್ಟಿ, ಪ್ರಶಾಂತ ಕೋಮಾರ, ಶ್ರೀಕಾಂತ ಹಲಗಲಿ ಹಾಗೂ ಮುಧೋಳ ತಾಲ್ಲೂಕಿನ ಯುನಿವರ್ಸಲ್ ಸೊಂಪು ಬೆಳೆ ವಿಮಾ ಕಂಪನಿಯ ಅಧಿಕಾರಿಗಳಾದ ಯಶವಂತ, ರಾಕೇಶ, ಪ್ರಕಾಶ ಮತ್ತು ಅನೀಲ ಬೀಳಗಿ ವಿರುದ್ಧ ಮುಧೋಳ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಸಿದ್ಧಲಿಂಗೇಶ ದೊಡಮನಿ ದೂರು ಕೊಟ್ಟಿದ್ದಾರೆ.

ರಾಕೇಶ, ಅನಿಲ್ ಬೀಳಗಿ, ಬಾಲರಾಜು ಪಾಳೆಗಾರ ಗಂಗಪ್ಪ ಇಟ್ನಾಳ ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

ಮುಧೋಳ ತಾಲ್ಲೂಕಿನ ಮೆಟಗುಡ್ಡ ಹಾಗೂ ಗುಲಗಾಲಜಂಬಗಿ ಗ್ರಾಮದ ರೈತರು ಐದು ತಿಂಗಳ ಹಿಂದೆ ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ದೂರು ನಿಡಿದ್ದರು.

ಸರಿಯಾದ ಸಮೀಕ್ಷೆ ನೀಡಿ ವರದಿ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಹಾಗೂ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಸರ್ವೆ ಮಾಡಿದಾಗ ವ್ಯತ್ಯಾಸ ಕಂಡು ಬಂದಿದೆ ಎಂದು ವರದಿ ನೀಡಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.