ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರಕಲಾವಿದ ವಿಜಯ ಸಿಂಧೂರ ನಿಧನ

Published : 28 ಸೆಪ್ಟೆಂಬರ್ 2024, 16:22 IST
Last Updated : 28 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments

ಜಮಖಂಡಿ: ಚಿತ್ರಕಲಾವಿದ ವಿಜಯ ಗಂಗಪ್ಪ ಸಿಂಧೂರ (84) ಶನಿವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

1940ರ ಜೂನ್ 7ರಂದು ಬನಹಟ್ಟಿಯಲ್ಲಿ ಜನಿಸಿದ ವಿಜಯ ಸಿಂಧೂರ ಅವರು ಶಾಲಾ ಶಿಕ್ಷಣವನ್ನು ಜಮಖಂಡಿಯಲ್ಲಿ ಪೂರ್ಣಗೊಳಿಸಿದರು. ಕಾಲೇಜು ಶಿಕ್ಷಣವನ್ನು ಮುಂಬೈನ ಜೆ.ಡಿ.ಆರ್ಟ್‌ ಮತ್ತು ಜೆ.ಜೆ.ಕಲಾಶಾಲೆಯಲ್ಲಿ ಪಡೆದ ಅವರು ಬಿತ್ತಿಚಿತ್ರ ರಚನೆ ಬಗ್ಗೆ ಅಧ್ಯಯನ ಮಾಡಿದರು. 1965ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಮತ್ತು ಮದರಾಸಿನ ಕೇಂದ್ರ ಲಲಿತಕಲಾ ಅಕಾಡೆಮಿಯ ವಿಭಾಗೀಯ ಕೇಂದ್ರದ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಬೆಂಗಳೂರಿನ ಮ್ಯಾಕ್ಸ್‌ಮುಲ್ಲರ್ ಕಲಾ ಗ್ಯಾಲರಿ, ಮುಂಬೈನ ತಾಜ್ ಕಲಾ ಗ್ಯಾಲರಿ, ಜಹಾಂಗೀರ ಕಲಾ ಗ್ಯಾಲರಿ, ನವದೆಹಲಿ ಧರುಣಿ ಕಲಾ ಗ್ಯಾಲರಿಗಳಲ್ಲಿ ಅಲ್ಲದೇ ದೇಶ–ವಿದೇಶದ ಕಲಾ ಗ್ಯಾಲರಿಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ವಿಶ್ವಕನ್ನಡ ಸಮ್ಮೇಳನ, ಸಾರ್ಕ್ ಸಮ್ಮೇಳನ, ರಾಷ್ಟ್ರೀಯ ಕಲಾ ಉತ್ಸವ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲೂ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ವಿಜಯ ಸಿಂಧೂರ ಅವರಿಗೆ ವೆಂಕಟಪ್ಪ ಪ್ರಶಸ್ತಿ, ರಾಷ್ಟ್ರೀಯ ಲಲಿತ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಪಟೇಲ್ ಟ್ರೋಫಿ, ಆರ್ಟ್ ಸೊಸೈಟಿ ಆಫ್ ಇಂಡಿಯಾ, ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಹಾಲಭಾವಿ ಕುಂಚಕಲಾ ತಪಸ್ವಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT