ಬನಶಂಕರಿ (ಬಾದಾಮಿ): ‘ದೇವಾಂಗ ಸಮಾಜದ ಜನತೆ ಉದ್ಯೋಗದ ಜೊತೆಗೆ ಆರ್ಥಿಕವಾಗಿ ಸಬಲರಾಗಲು ಪೋಷಕರು ಮಕ್ಕಳಿಗೆ ಬದುಕನ್ನು ಕಟ್ಟಿಕೊಳ್ಳುವ ಶಿಕ್ಷಣ ಕೊಡಿ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಬನಶಂಕರಿ ದೇವಾಲಯದ ಹೊರವಲಯದಲ್ಲಿ ಶುಕ್ರವಾರ ಅಖಿಲ ಭಾರತ (ನೇಕಾರ) ದೇವಾಂಗ ಜಾಗೃತಿ ಸಮಾವೇಶ ಮತ್ತು ದಯಾನಂದಪುರಿ ಶ್ರೀಗಳ 36ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.

ದೇವಾಂಗ ಸಮುದಾಯದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವೆ. ಸಮುದಾಯದ ಅಭಿವೃದ್ಧಿಗೆ ಶ್ರಮಿಸುವೆ. ಯಾತ್ರಿ ನಿವಾಸದ ಕಟ್ಟಡಕ್ಕೆ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ₹10 ಲಕ್ಷ ಅನುದಾನ ಕೊಡುವುದಾಗಿ ಭರವಸೆ ನೀಡಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದೇವಾಂಗ ಸಮುದಾಯಕ್ಕೆ ಬರುವ ಯೋಜನೆಗಳನ್ನು ಕೊಡಿಸಲು ಶ್ರದ್ಧೆಯಿಂದ ಕೆಲಸ ಮಾಡುವೆ. ಯಾತ್ರಿ ನಿವಾಸದ ಕಟ್ಟಡಕ್ಕೆ ₹25 ಲಕ್ಷ ಅನುದಾನ ಕೊಡುವೆ ’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

‘ಮಗ್ಗದಿಂದ ಬಟ್ಟೆಯನ್ನು ನೇಯ್ದು ಮನುಷ್ಯನ ಮಾನ ಮುಚ್ಚಿದವರು ನೇಕಾರ ಸಮುದಾಯದವರು. ಶುಭ ಸಂದರ್ಭದ ಮದುವೆಯಲ್ಲಿ ತಾಳಿ ಕಟ್ಟಲು ದಾರವನ್ನು ನೇಯ್ದವರು ನೇಕಾರ ಸಮುದಾಯದವರು. ನೀವೂ ಸಹ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನೆಲೆಗೆ ಬನ್ನಿ ’ ಎಂದರು.

ಲೇಖಕ ಶಂಕ್ರಪ್ಪ ಚೌಡಾಪೂರ ಇಂಗ್ಲಿಷಿನಲ್ಲಿ ಅನುವಾದಿಸಿದ ‘ಆದ್ಯ ವಚನಕಾರ ದೇವರದಾಸಿಮಯ್ಯ ಕೃತಿಯನ್ನು ಶಾಸಕ ಅಭಯ ಪಾಟೀಲ ಬಿಡುಗಡೆ ಮಾಡಿ ‘ ದೇವಾಂಗ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಪಕ್ಷಾತೀತವಾಗಿ ಎಲ್ಲರೂ ಸಹಾಯ ಮಾಡೋಣ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನೇಕಾರ ಅಭಿವೃದ್ಧಿ ನಿಗಮ ರಚಿಸಿದ್ದಾರೆ. ಅನುದಾನಕ್ಕಾಗಿ ಸ್ಥಳೀಯ ಶಾಸಕರು ಮಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದರು.

ಸಮುದಾಯದ ಬೇಡಿಕೆಗಳು, ಜನ ಜಾಗೃತಿ ಮತ್ತು ಸಂಘಟನೆಗೆ ಸಮಾವೇಶಗಳು ಅವಶ್ಯ. ರಾಜ್ಯದ ಬೆಳಗಾವಿಯಲ್ಲಿ ಹೊಸದಾಗಿ ನೇಕಾರ ಮಹಾದ್ವಾರ ರೂಪಿಸಲಾಗಿದೆ. ಉದ್ಘಾಟನೆ ಸಮಾರಂಭಕ್ಕೆ ಬನ್ನಿ ಎಂದು ಶಾಸಕರನ್ನು ಆಹ್ವಾನಿಸಿದರು.

‘ಸರ್ಕಾರ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಪವರಲೂಮ್ ಅಭಿವೃದ್ಧಿ ನಿಗಮ ಮಾಡಿದೆ. ಇದರಿಂದ ಆರ್ಥಿಕವಾಗಿ ನೇಕಾರ ಸಮುದಾಯಕ್ಕೆ ಅನುಕೂಲವಾಗಿಲ್ಲ. ಬೇರೆಯವರಿಗೆ ಅನುಕೂಲವಾಗಿದೆ. ಪ್ರತ್ಯೇಕವಾಗಿಯೇ ನೇಕಾರರಿಗೆ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚಿಸಬೇಕು ’ ಎಂದು ರಾಜ್ಯ ದೇವಾಂಗ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಸರ್ಕಾರಕ್ಕೆ ಒತ್ತಾಯಿಸಿದರು.

ಸಣ್ಣಕ್ಕಿ ಬಾಗೂರ, ಬನಶಂಕರಿ ಉತ್ಸವ ಮೂರ್ತಿಯ ಆಹ್ವಾನದೊಂದಿಗೆ ಚೌಡೇಶ್ವರ ದೇವಿಯ ಕತ್ತಿ ಹಬ್ಬವನ್ನು ಭಕ್ತರು ಸಂಭ್ರಮದಿಂದ ಆಚರಿಸಿದರು. ದಯಾನಂದಪುರಿ ಸ್ವಾಮೀಜಿ, ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ಶಂಕರ ಶಿವಾಚಾರ್ಯ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಅಭಿನವ ರೇವಣಸಿದ್ಧ ಸ್ವಾಮೀಜಿ, ನಾಗನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಸಭಾ ಸದಸ್ಯ ಕೆ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ರಾಜಶೇಖರ್ ಶೀಲವಂತ, ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್, ಬಿ.ಆರ್.ಗಿರಿಯಪ್ಪ, ಎಸ್.ಆರ್.ಸಿದ್ದಲಿಂಗನ್ನವರ, ಗೋವಿಂದಪ್ಪ, ಗಣೇಶ, ಬಿ.ಎಸ್. ಸೋಮಶೇಖರ್ ವೇದಿಕೆಯಲ್ಲಿ ಇದ್ದರು.

ದೇಶದ ವಿವಿಧ ರಾಜ್ಯಗಳಿಂದ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ದೇವಾಂಗ ಸಮುದಾಯದ ಮುಖಂಡರು ಮತ್ತು ಜನತೆ ಆಗಮಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-19-947749566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.