ಮಹಾಲಿಂಗಪುರ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಡೆಯುವ ಸಾಲವನ್ನು ಸ್ವ ಸಹಾಯ ಸಂಘದ ಸದಸ್ಯೆಯರು ಉತ್ತಮ ಕೆಲಸಗಳಿಗಾಗಿ ಸದ್ಬಳಕೆ ಮಾಡಿಕೊಂಡು ಕುಟುಂಬದ ಆರ್ಥಿಕ ಸಬಲತೆ ಸಾಧಿಸಲು ಪ್ರಯತ್ನಿಸಿ’ ಎಂದು ಯೋಜನೆಯ ಮುಧೋಳ ತಾಲ್ಲೂಕು ಅಧಿಕಾರಿ ರಾಜು ಎನ್. ಹೇಳಿದರು.

ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರನ್ನಬೆಳಗಲಿ ವಲಯದ ಗುರುನಾಥಾರೂಢ ಸ್ವ-ಸಹಾಯ ಸಂಘದ ಸದಸ್ಯರಿಗೆ ಯೋಜನೆಯಿಂದ ಮಂಜೂರಾದ ₹4.50 ಲಕ್ಷ ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

‘ಬಡವರಿಗೆ ಬ್ಯಾಂಕ್ಗಳಿಂದ ನೇರವಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೊಡಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಂಸ್ಥೆ ಮೂಲಕ ಎಲ್ಲಾ ಸಾಲಗಳ ಮರುಪಾವತಿ ಜವಾಬ್ದಾರಿ ನೀಡಲಾಗಿದೆ. ಇದರಿಂದ ಬ್ಯಾಂಕಗಳು ಯೋಜನೆಯ ಸ್ವ-ಸಹಾಯ ಸಂಘಗಳ ವ್ಯವಸ್ಥೆ ಮೂಲಕ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಯಾವುದೇ ಆಸ್ತಿಪಾಸ್ತಿ ಅಡಮಾನ ಪಡೆಯದೇ, ದಾಖಲೆ ಪತ್ರ ಇತ್ಯಾದಿಗಳಿಲ್ಲದೇ ಅತೀ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕನ ಸಾಲ ಸೌಲಭ್ಯ ಸಿಗುತ್ತಿದೆ’ ಎಂದರು.

ಯೋಜನೆಯ ರನ್ನಬೆಳಗಲಿ ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿ ಅನ್ನಪೂರ್ಣ ಧಡೂತಿ, ಹಣ ಮರು ಪಾವತಿ ಕೇಂದ್ರದ ಚೈತ್ರಾ ಲಾತೂರ, ಗುರುನಾಥಾರೂಢ ಸ್ವ-ಸಹಾಯ ಸಂಘದ ಅಧ್ಯಕ್ಷೆ ಜಯಶ್ರೀ ಮೋರೆ, ಸುಜಾತಾ ಹೂಗಾರ, ಅನ್ನಪೂರ್ಣ ಚಿಮ್ಮಡ, ಬೋರವ್ವ ಹೂಗಾರ, ಲಲಿತಾ ಬುರುಡ, ಮಾನವ್ವ ಕಲ್ಯಾಣಿ, ಸಿದ್ದವ್ವ ಕಿಡದಾಳ, ಕಲ್ಲವ್ವ ಲೋಕನ್ನವರ, ಶಶಿಕಲಾ ಮೋರೆ, ಸರೋಜನಿ ಆರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-19-1933529793

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.