ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರ ಲಿಂಗರಾಜು ದೇವಾಲಯದಲ್ಲಿ ಶೂಟಿಂಗ್: ನಟಿ ರವೀನಾ ಟಂಡನ್ ವಿರುದ್ಧ ದೂರು ದಾಖಲು

Last Updated 7 ಮಾರ್ಚ್ 2018, 11:46 IST
ಅಕ್ಷರ ಗಾತ್ರ

ಭುವನೇಶ್ವರ : ಒಡಿಶಾದ ಭುವನೇಶ್ವರದಲ್ಲಿರುವ ಪುರಾತನ ಲಿಂಗರಾಜು ದೇವಾಲಯದ ಕ್ಯಾಮರ ನಿಷೇಧದ ವಲಯದಲ್ಲಿ ಜಾಹೀರಾತಿನ ಶೂಟಿಂಗ್ ಕೈಗೊಂಡ ಕಾರಣ ನಟಿ ರವೀಬಾ ಟಂಡನ್ ವಿರುದ್ಧ ದೇವಾಲಯದ ಆಡಳಿತ ಮಂಡಳಿ ದೂರು ದಾಖಲಿಸಿದೆ.

ದೇವಾಲಯದೊಳಗೆ ರವೀನಾ ಅವರು ಸೌಂದರ್ಯದ ಬಗ್ಗೆ ಸಲಹೆ ನೀಡುತ್ತಿರುವ ಜಾಹೀರಾತಿನ ಶೂಟಿಂಗ್‌ನ್ನು ವ್ಯಕ್ತಿಯೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಈ ಆರೋಪವನ್ನು ತಳ್ಳಿಹಾಕಿರುವ ನಟಿ ರವೀನಾ, ಅಲ್ಲಿ ಯಾವುದೇ ಏಜೆನ್ಸಿ ಇರಲಿಲ್ಲ. ಯಾವುದೇ ಜಾಹೀರಾತಿನ ಶೂಟಿಂಗ್ ನಡೆಯುತ್ತಿರಲಿಲ್ಲ. ಅಲ್ಲದೇ ಸ್ಥಳೀಯರು, ಮಾಧ್ಯಮದವರು, ದೇವಾಲಯದ ಸದಸ್ಯರು ದೇವಾಲಯದೊಳಗೇ ವಿಡಿಯೊ ಮಾಡುತ್ತಿದ್ದರು. ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಎಂದು ಸಮಜಾಯಿಷಿ ನೀಡಿದ್ದಾರೆ. 

ಅಲ್ಲದೇ  ನನಗೆ ದೇವಾಲಯದೊಳಗೆ ಮೊಬೈಲ್ ನಿಷೇಧಸಿರುವ ವಿಚಾರ ನನಗೆ ತಿಳಿದಿರಲಿಲ್ಲ. ದೇವಾಲಯ ಸಿಬ್ಬಂದಿಯೂ ನನಗೆ ಇದರ ಬಗ್ಗೆ ತಿಳಿಸಿಲ್ಲ. ಫೋಟೊ ತೆಗೆದುಕೊಂಡಾಗ ಆಕ್ಷೇಪ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ.

ಕ್ಯಾಮರ ನಿಷೇಧದ ವಲಯದಲ್ಲಿ ಜನರು ನನ್ನ ಬಳಿ ಬಂದು ವಿಡಿಯೊ, ಫೋಟೊ, ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ಕಂಡು ದೇವಾಲಯ ಆಡಳಿತ ಮಂಡಳಿ ಆತಂಕಗೊಂಡಿದ್ದರು. ನಿಷೇಧದ ಬಗ್ಗೆ ತಿಳಿಯದ ಕಾರಣ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದ್ದಾರೆ.

ದೇವಾಲಯದ ಸೇವಾರ್ಥಿಗಳಿಗೆ ಮಾತ್ರ ಮೊಬೈಲ್‌ ಬಳಸಲು ಅವಕಾಶ ನೀಡಲಾಗಿದೆ. ಭದ್ರತಾ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಈ ಘಟನೆ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೇವಾಲಯ ಆಡಳಿತ ಮಂಡಳಿಯ ನಿರ್ವಹಣಾಧಿಕಾರಿ ರಾಜೀವ್ ಲೋಚನ್ ಫರೀದ ಹೇಳಿದ್ದಾರೆ.

ದಯವಿಟ್ಟು ಈ ಚಿತ್ರದಲ್ಲಿರುವ ಮಹಿಳೆಯನ್ನು ಗಮನಿಸಿ. ಅವರು ಸ್ಥಳೀಯರು. ಆದರೂ ಕೈಯಲ್ಲಿ ಮೊಬೈಲ್ ಹಿಡಿದಿದ್ದಾರೆ. ಈ ರೀತಿ ನಾನು ಮಾಡಲಿಲ್ಲ ಎಂದು ರವೀನಾ ಟ್ವಿಟ್ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT