ವಿನಾಯಕ ದಾಸಮನಿ
ಕೆರೂರ: ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಪಟ್ಟಣದಲ್ಲಿ ನಾಗರಿಕರು ನಿತ್ಯ ಪರದಾಟ ನಡೆಸಿದ್ದಾರೆ. ಸರ್ಕಾರದ ವಿವಿಧ ಯೋಜನೆ ಲಾಭಕ್ಕಾಗಿ ಮತ್ತು ಅತ್ಯವಶ್ಯಕ ಆಧಾರ್ ಕಾರ್ಡ್ ಸಮಸ್ಯೆಗಳಿಂದ ಜನರು, ವಿದ್ಯಾರ್ಥಿಗಳು ನಿತ್ಯ ಅಂಚೆ ಕಚೇರಿ, ನಾಡ ಕಚೇರಿಗಳ ಕೇಂದ್ರಗಳಲ್ಲಿ ಸರ್ವರ್ ಮಂದಗತಿಯ ಕಾರಣ ಪರದಾಟಕ್ಕೆ ಇಂಬು ನೀಡಿದೆ.
ಈ ಕೇಂದ್ರಗಳಲ್ಲಿ ನಿತ್ಯ 50 ರಿಂದ 80 ಜನರಿಗೆ ಮಾತ್ರ ಆಧಾರ ತಿದ್ದುಪಡಿ ಮಾಡಲು ಅವಕಾಶವಿದೆ. 80 ಜನರ ಸರದಿ ಮುಗಿದ ಮೇಲೆ ಸರ್ವರ್ ಸಾಮಾನ್ಯವಾಗಿ ಡೌನ ಆಗುವುದರಿಂದ ಪ್ರತಿದಿನ ತೊಂದರೆ ತಪ್ಪುತ್ತಿಲ್ಲ. ನಿತ್ಯ ನಾಲ್ಕೈದು ನೂರು ಜನರು ಬರುತ್ತಾರೆ.
ಅಂಚೆ ಸಿಬ್ಬಂದಿಗೆ ಕಿರಿಕಿರಿ: ಸುತ್ತಲಮುತ್ತಲಿನ ಹಳ್ಳಿಗಳಾದ ಮತ್ತಿಕಟ್ಟಿ, ಕಡಪಟ್ಟಿ, ಮಾಲಗಿ, ನರೇನೂರ, ಫಕೀರಬೂದಿಹಾಳ, ಬೆಳ್ಳಿಕಿಂಡಿ, ಸಾಗನೂರ, ಹೂಲಗೇರಿ, ಹೊಸೂರು ಗ್ರಾಮದ ಜನರು ನಿತ್ಯ ಮನೆಯಲ್ಲಿನ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆಯುತ್ತಿದ್ದಾರೆ. ಆದರೆ ಅಂಚೆ ಇಲಾಖೆಯ ಸರ್ವರ್ ಇರುವುದೇ ಇಲ್ಲ.
‘ಶಾಲೆಯಲ್ಲಿ ಶಿಷ್ಯವೇತನದ ಅರ್ಜಿ ಹಾಕಲು, ಆಧಾರ್ ಕಾರ್ಡ್ ಮಾಹಿತಿ ಹಾಗೂ ಶಾಲಾ ದಾಖಾಲಾತಿಯಲ್ಲಿ ಒಂದೇ ಇರಬೇಕಾಗಿರುವುದರಿಂದ ಆಧಾರ್ ತಿದ್ದುಪಡಿಗಾಗಿ ಶಾಲೆ ಬಿಟ್ಟು ನಿತ್ಯ ಬರುತ್ತಿದ್ದೇನೆ’ ಎಂದು 5ನೇ ತರಗತಿ ವಿದ್ಯಾರ್ಥಿ ಸಂಜೀವ್ ಚಿಕ್ಕನರಗುಂದ ನೋವಿನಿಂದ ಹೇಳಿದರು.
‘ಸರ್ಕಾರದ ಯೋಜನೆ ಪಡೆಯಲು ಕೆರೂರ ಪಟ್ಟಣ ಹಾಗೂ ಸುತ್ತುಮುತ್ತಲ ಹಳ್ಳಿಗಳಲ್ಲಿ ಆಧಾರ್ ತಿದ್ದುಪಡಿ ಜನ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ’ ಎಂದು ಎನ್ನುತ್ತಾರೆ ಇಲ್ಲಿನ ಪೋಸ್ಟ್ ಮಾಸ್ಟರ್ ಸಂತೋಷ ಗಡಾದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.