ದುರ್ಗಾದೇವಿ ಜಾತ್ರೆ ಮುನ್ನಾದಿನ ಗುರುವಾರ ರಾತ್ರಿ ಜಾಗರಣೆ ಜೊತೆಗೆ ದೇವಿ ಮಹಾತ್ಮೆ ಕಾರ್ಯಕ್ರಮ, ಶುಕ್ರವಾರ ಬೆಳಗಿನ ಜಾವ ಭಕ್ತರಿಂದ ದೀಡ್ ನಮಸ್ಕಾರ, ಕುಂಕುಮಾರ್ಚನೆ ಕಾರ್ಯಕ್ರಮ ನೆರವೇರಿದವು. ನಂತರ ಪರಸ್ಪರ ಭಂಡಾರ ಎರಚುತ್ತ ದೇವಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ನಂತರ ದೇವಿಗೆ ಉಡಿ ತುಂಬಿ ಪೂಜೆ ನೆರವೇರಿಸಿದರು.