ಹುನಗುಂದ: ‘ಸಂಪತ್ತಿನ ಸಮಾನ ಹಂಚಿಕ ಆದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯ’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ಜಿ.ಎ. ಮೂಲಿಮನಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ಶನಿವಾರ ಹುನಗುಂದ ಮತ್ತು ಇಳಕಲ್ ತಾಲ್ಲೂಕು ವಕೀಲರ ಸಂಘದ ಸಹಯೋಗದಲ್ಲಿ ನಡೆದ ವಕೀಲರ ವೆಲ್ ಫೇರ್ ಫಂಡ್ ಸ್ಟಾಂಪ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ನಮ್ಮ ನೆರೆಹೊರೆ ಹಾಗೂ ಕೆಳ ಮಟ್ಟದಲ್ಲಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತಂದಾಗ ನಮ್ಮ ಬದುಕು ಸಾರ್ಥಕ ಆಗುತ್ತದೆ’ ಎಂದರು.

ರಾಜ್ಯ ವಕೀಲರ ಪರಿಷತ್ತು ಸದಸ್ಯ ಎಸ್.ಎಸ್. ಮಿಟ್ಟಲಕೋಡ ಮಾತನಾಡಿ, ‘ಜಿಲ್ಲೆಯಲ್ಲಿ ಹುನಗುಂದದಲ್ಲಿ ಪ್ರಥಮ ಬಾರಿಗೆ ವೆಲ್ ಫೇರ್ ಫಂಡ್ ಆರಂಭಿಸಲಾಗಿದೆ. ವಕೀಲರ ಸಂಘ ಒಂದು ಕುಟುಂಬ ಎಂದು ತಿಳಿಯಿರಿ. ನಾನು ಸಹ ತನುಮನ ಧನದಿಂದ ಸಹಕಾರ ನೀಡುವೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಮಾತನಾಡಿ, ‘ವಕೀಲರ ಕಲ್ಯಾಣಕ್ಕಾಗಿ ವೇಲ್ ಫೇರ್ ಸ್ಥಾಪಿಸಲಾಗಿದೆ ಹೊರತು ವೈಯಕ್ತಿಕ ಸ್ವಾರ್ಥಕ್ಕೆ ಅಲ್ಲ. ಸಂಘದ ಶ್ರೇಯೋಭಿವೃದ್ದಿಗೆ ಅಭಿಪ್ರಾಯ ವ್ಯಕ್ತಪಡಿಸಿದ ವಕೀಲರ ಸಲಹೆ ಸೂಚನೆ ಪಾಲಿಸಲಾಗುವುದು’ ಎಂದು ತಿಳಿಸಿದರು.

ಇಳಕಲ್ ವಕೀಲರ ಸಂಘದ ಅಧ್ಯಕ್ಷ ಬಿ.ಎ. ಆವಟಿ ಪ್ರಾಸ್ತಾವಿಕವಾಗಿ, ವಕೀಲರದಾದ ವಿ.ಆರ್. ಜನಾದ್ರಿ, ಎಂ.ಎಚ್. ಮಳ್ಳಿ, ಎಂ.ಬಿ. ದೇಶಪಾಂಡೆ, ಎನ್.ಜೆ. ರಾಮವಾಡಗಿ ಮಾತನಾಡಿದರು.

ನ್ಯಾಯಾಧೀಶರಾದ ಹನಮಂತರಾವ್ ಕಲುಕರ್ಣಿ, ಬಸವರಾಜ ನೇಸರಗಿ, ಗದಗ ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ.ಹದ್ಲಿ ಗ್ರೇಡ್–2 ತಹಶೀಲ್ದಾರ್ ಮಹೇಶ ಸಂದಿಗೌಡ್ ಹಾಗೂ ಹುನಗುಂದ ಮತ್ತು ಇಳಕಲ್ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.