ಜಮಖಂಡಿ: 12 ವರ್ಷಗಳಿಂದ ನಡೆಯುತ್ತಿರುವ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ(ತೋದಲಬಾಗಿ-ಚಿಕ್ಕಲಕಿ ಏತ ನೀರಾವರಿ ಯೋಜನೆ) ಕಾಮಗಾರಿ ಪೂರ್ಣಗೊಳಿಸುವಿದು ವಿಳಂಬವಾಗುತ್ತಿದೆ ಎಂದು ಚಿಕ್ಕಲಕಿ ಕ್ರಾಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ರೈತ ಶ್ರೀಕಾಂತ ಬಡಿಗೇರ ಮರಹತ್ತಿ ಆತ್ಮಹತ್ಯೆಗೆ ಯತ್ನಿಸಿದರು.

ಆರು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಕೆಳಗಿಳಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ ಮಾತನಾಡಿ, ಈ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗಲಿ ಎಂದು 8 ತಿಂಗಳ ಕಾಲ ನೀರಾವರಿ ಕಲ್ಪಿಸಲು 2013 ರಲ್ಲಿ ಈ ಆಭವಾದ ಕಾಮಗಾರಿ ಪೂರ್ಣವಾಗಿಲ್ಲ. ಆರು ತಿಂಗಳಲ್ಲಿ ಉಳಿದ ಕಾಮಗಾರಿ ಪೂರ್ಣಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದರು.

ಕೃಷ್ಣಾ ನದಿಯಲ್ಲಿ ನೀರು ಹರಿದು ಸಮುದ್ರ ಸೇರುತ್ತದೆ, ಪಕ್ಕದಲ್ಲಿ ನೀರು ಇಟ್ಟುಕೊಂಡು ರೈತರಿಗೆ ಅನುಕೂಲ ಇಲ್ಲದಂತಾಗಿದೆ, ಈ ಭಾಗದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಾಮಗಾರಿಗೆ ರೈತರು ತಕರಾರು ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ಮನೆಗೂ ನೀರು, ವಿದ್ಯುತ್ ಇನ್ನೊಬ್ಬ ರೈತರ ಹೊಲದಲ್ಲಿ ಹಾದು ಬರುತ್ತದೆ ಎಂಬುದನ್ನು ರೈತರು ತಿಳಿದುಕೊಳ್ಳಬೇಕು ಎಂದರು.

ರೈತ ಮುಖಂಡ ಜೋತಿಬಾ ಚಹ್ವಾಣ ಮಾತನಾಡಿ, ರೈತರ ಬದುಕು ಹಾಳಾಗುತ್ತಿದೆ. ಈ ಮೊದಲು ಮಾಡಿರುವ ಕಾಮಗಾರಿಯೂ ಹಾಳಾಗುತ್ತಿದೆ. ಯೋಜನೆ ಪೂರ್ಣ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ರೈತ ಸಿದ್ಧರಾಯ ಸನಸಿದ್ದ, ರಾಮಪ್ಪ ಕರ್ಜಗಿ, ಗೂಡುಸಾಬ ಹೊನವಾಡ, ಸಾದೇವ ಕದಂ, ನಿಂಗಪ್ಪ ಸನಸಿದ್ಧ, ಅಪ್ಪಶಿ ಗೋರಗಾಂವಕರ, ಶ್ರೀಶೈಲ ಸಾಯಗೊಂಡ,ಸದಾಶಿವ ಪಾಟೀಲ, ಪರಸು ಜಮಖಂಡಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.