ಗುರುವಾರ , ನವೆಂಬರ್ 21, 2019
22 °C
ಡಾ. ಮನಮೋಹನ ಅತ್ತಾವರ್ ಮೆಮೋರಿಯಲ್ ರಾಷ್ಟ್ರೀಯ ಸಮ್ಮೇಳನ

‘ರೈತರು ವಿಜ್ಞಾನಿಗಳ ಸಲಹೆ ಪಡೆಯಿರಿ’

Published:
Updated:
Prajavani

ಬಾಗಲಕೋಟೆ: ‘ವಿಜ್ಞಾನದ ಬೆಳವಣಿಗೆಯಿಂದ ಪ್ರತಿನಿತ್ಯ ದೇಶಕ್ಕೆ ಸುಧಾರಿತ ತಂತ್ರಜ್ಞಾನ ಬರುತ್ತಿದ್ದು, ವಿಜ್ಞಾನಿಗಳಿಂದ ಸಲಹೆ, ಸೂಚನೆ ಪಡೆದು ರೈತರು ಆದಾಯ ವೃದ್ಧಿಸಿಕೊಳ್ಳಬೇಕು’ ಎಂದು ತೋಟಗಾರಿಕೆ ಸಚಿವ ವಿ.ಸೋಮಣ್ಣ  ಕಿವಿಮಾತು ಹೇಳಿದರು. 

ಸಮೀಪದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇಂಡೋ–ಅಮೆರಿಕನ್ ಹೈಬ್ರಿಡ್ ಸೀಡ್ಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ. ಮನಮೋಹನ ಅತ್ತಾವರ ಮೆಮೋರಿಯಲ್ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 

‘ದೇಶಕ್ಕೆ ಯಾವುದೂ ಕೊರತೆ ಇಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಇದ್ದಾಗ ಮಾತ್ರ ಪ್ರತಿಯೊಬ್ಬರ ಕೆಲಸಕ್ಕೆ ಮಾನ್ಯತೆ ಬರುತ್ತದೆ. ರೈತರಿಗೆ ಒಳ್ಳೆಯ ಅವಕಾಶ ನೀಡುವ ಸದುದ್ದೇಶದಿಂದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕಟ್ಟಲಾಗಿದೆ. ಇದು ಇಡೀ ದೇಶಕ್ಕೆ ಸಮರ್ಪಕ ಕೊಡುಗೆ ನೀಡಬೇಕಿದೆ’ ಎಂದರು.

ತಾಂತ್ರಿಕ ವಿಷಯಗಳ ಕೈಪಿಡಿ ಮತ್ತು ಬೀಜಗಳನ್ನು ಗಣ್ಯಮಾನ್ಯರು ಮತ್ತು ಸ್ಮರಣ ಸಂಚಿಕೆಯನ್ನು ಬೆಂಗಳೂರಿನ ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಸಂಸ್ಥೆಯ ಅಧ್ಯಕ್ಷ ಅರ್ತೂರ್ ಸಂತೋಷ ಅತ್ತಾವರ ಬಿಡುಗಡೆಗೊಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ದೊಡ್ಡನಗೌಡ ಪಾಟೀಲ, ವಿಶ್ವ ವಿದ್ಯಾಲಯದ ಕುಲಪತಿ ಡಾ. ಇಂದಿರೇಶ, ಬೀಜ ವಿಭಾಗದ ವಿಶೇಷ ಅಧಿಕಾರಿ ಡಾ. ಡಿ.ಆರ್.ಪಾಟೀಲ, ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್.ಬಂಥನಾಳ, ನಿವೃತ್ತ ಕುಲಪತಿ ಡಾ. ಎಸ್.ಬಿ.ದಂಡಿನ, ಸಹ ಸಂಯೋಜನಾ ಕಾರ್ಯದರ್ಶಿ ಡಾ.ಶಿವಯೋಗಿ ರ‍್ಯಾವಳದ ಮತ್ತು ಡಾ. ಬಾಪುರಾಯನಗೌಡ ಪಾಟೀಲ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)