ಅಪ್ಪನ ಸಾವು, ಮಗನ ಸ್ಥಿತಿ ಚಿಂತಾಜನಕ

7
ವಿಷಸೇವನೆಯಲ್ಲಿ ಅಂತ್ಯಗೊಂಡ ಕುಡಿತದ ವಿಚಾರದ ಜಗಳ

ಅಪ್ಪನ ಸಾವು, ಮಗನ ಸ್ಥಿತಿ ಚಿಂತಾಜನಕ

Published:
Updated:

ಬಾಗಲಕೋಟೆ: ಕುಡಿತದ ವಿಚಾರಕ್ಕೆ ಜಗಳವಾಡಿದ ಅಪ್ಪ–ಮಗ ಇಬ್ಬರೂ ವಿಷ ಸೇವಿಸಿದ ಘಟನೆ ತಾಲ್ಲೂಕಿನ ಸೀಗಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ವಿಷ ಸೇವನೆಯಿಂದ ಅಪ್ಪ ಹೊಳೆಬಸಪ್ಪ ಸಾವಿಗೀಡಾಗಿದ್ದು, ಮಗ ಈರಣ್ಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಹೊಳೆಬಸಪ್ಪ ಅವರ ಕುಡಿತದ ವ್ಯಸನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಗ ಈರಣ್ಣ ಜಗಳವಾಡಿದ್ದಾರೆ. ನಂತರ ಮನನೊಂದು ಅವರು ವಿಷ ಸೇವನೆ ಮಾಡಿದ್ದಾರೆ. ಕುಟುಂಬದವರೊಂದಿಗೆ ಸೇರಿ ಹೊಳೆಬಸಪ್ಪ ಅವರೇ ಈರಣ್ಣನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಾಗಿದ್ದಾರೆ.

ರಾತ್ರಿಯೇ ಆಸ್ಪತ್ರೆಯಿಂದ ಮನೆಗೆ ಮರಳಿದ ಹೊಳೆಬಸಪ್ಪ ವಿಷಸೇವನೆ ಮಾಡಿದ್ದಾರೆ. ಗ್ರಾಮಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತಂದಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈರಣ್ಣನ ಸ್ಥಿತಿಯೂ ಚಿಂತಾಜನಕವಾಗಿದ್ದು, ಮನೆಯಲ್ಲಿನ ಸಣ್ಣ ಜಗಳ ಈ ಪರಿಸ್ಥಿತಿ ತಂದಿಟ್ಟಿತು ಎಂದು ಕುಟುಂಬದವರ ರೋದನ ಮುಗಿಲುಮಟ್ಟಿತ್ತು. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !