ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇತುವೆ ನೀರು ಸರಿದರೂ ಪ್ರಯಾಣಕ್ಕಿಲ್ಲ ಅವಕಾಶ

Published 2 ಆಗಸ್ಟ್ 2024, 14:43 IST
Last Updated 2 ಆಗಸ್ಟ್ 2024, 14:43 IST
ಅಕ್ಷರ ಗಾತ್ರ

ಮುಧೋಳ: ಘಟಪ್ರಭಾ ಪ್ರವಾಹದ ನೀರು ಇಳಿಮುಖವಾಗಿ‌ ತಾಲ್ಲೂಕಿನ ರಾಜ್ಯ ಹೆದ್ದಾರಿ 34ರ ಚಿಂಚಖಂಡಿ ಸೇತುವೆ ಮೇಲೆ‌ ದಾರಿಯಿದ್ದರೂ ಭಾರಿ ವಾಹನ ಸಂಚಾರಕ್ಕೆ‌ ಮಾತ್ರ ಇನ್ನೂ ಅವಕಾಶ ದೊರೆತಿಲ್ಲ.

ಸೇತುವೆ ಮೇಲೆ ಸಂಪೂರ್ಣ ನೀರು ಹಿಂದೆ ಸರಿದಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.

ಗುರುವಾರ ಬೆಳಿಗ್ಗೆಯಿಂದ ಕಾರು, ಬೈಕ್‌ಗಳ‌ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಅಧಿಕಾರಿಗಳು ಭಾರಿ ವಾಹನ‌ ಸಂಚಾರಕ್ಕೆ ಮಾತ್ರ ಅನುಮತಿ ನೀಡಿಲ್ಲ. ಸೇತುವೆ ಕೆಳಗೆ ಹೆಚ್ಚಿನ‌ಮಟ್ಟದಲ್ಲಿ ನೀರು ಸರಿದು ಸೇತುವೆ ಸ್ಥಿತಿಗತಿ ಅರಿತ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಜ್ಜರಮಟ್ಟಿ ಸೇತುವೆ ಸಂಚಾರಕ್ಕೆ ಮುಕ್ತ: ಪ್ರವಾಹಕ್ಕೆ ತುತ್ತಾಗಿ ಸಂಪರ್ಕ ಕಡಿದುಕೊಂಡಿದ್ದ ಮುಧೋಳ-ಕಾತರಕಿ ರಸ್ತೆ ಮೇಲೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಹ ತಗ್ಗಿದ ಬಳಿಕ ವಜ್ಜರಮಟ್ಟಿ ಸೇತುವೆ ಭಾರಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಮಂಟೂರ, ಕಿಶೋರಿ, ಹಲಗಲಿ‌ ಮಾರ್ಗ ಬಳಕೆ‌ ಮಾಡುವವರು ಇದೀಗ ವಜ್ಜರಮಟ್ಟಿ‌ ಮಾರ್ಗದಲ್ಲಿಯೇ ಸಂಚರಿಸಬಹುದಾಗಿದೆ.

ಪ್ರವಾಹ ಇಳಿಮುಖವಾಗಿದ್ದರೂ ನದಿ ಪಾತ್ರದ ಒಂದು ಕಿ.ಮೀಗಳಷ್ಟು ವ್ಯಾಪ್ತಿಯಲ್ಲಿ ನೀರು ಹೊಲಗಳಿಗೆ ನುಗ್ಗಿದ್ದರಿಂದ ಕಬ್ಬು, ಹೆಸರು, ಸೋಯಾಬಿನ್, ಗೋವಿನ ಜೋಳ ಹಾಗೂ ತರಕಾರಿ ಬೆಳೆ ನಾಶವಾಗಿದೆ. ರೈತರು ಕಂಗಾಲಾಗಿದ್ದಾರೆ. ಬೆಳೆ ಸಮೀಕ್ಷೆ ನಡಿಸಿ ಪ್ರವಾಹ ಪರಿಹಾರ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ ಹಾಗೂ ಕಾರ್ಯದರ್ಶಿ ಡಾ.ರವಿ ನಂದಗಾಂವಿ ಆಗ್ರಹಿಸಿದ್ದಾರೆ.

ಮುಧೋಳ ತಾಲ್ಲೂಕು ಚಿಂಚಖಂಡಿ ಸೇತುವೆ ಮೇಲೆ ನೀರು ಇಲ್ಲದೇ ಇದ್ದರೂ ಪ್ರಯಾಣಕ್ಕೆ ಅವಕಾಶ ಸಿಗದ ಸೇತುವೆ
ಮುಧೋಳ ತಾಲ್ಲೂಕು ಚಿಂಚಖಂಡಿ ಸೇತುವೆ ಮೇಲೆ ನೀರು ಇಲ್ಲದೇ ಇದ್ದರೂ ಪ್ರಯಾಣಕ್ಕೆ ಅವಕಾಶ ಸಿಗದ ಸೇತುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT