ಮಹಾಲಿಂಗಪುರ: ‘ನಾವು ಇಷ್ಟಲಿಂಗವನ್ನು ಪೂಜೆ ಮಾಡುವಾಗ ವಿಧಿ ವಿಧಾನ, ನಿಯಮಗಳನ್ನು ಅನುಸರಿಸಬೇಕು. ಮನಸ್ಸಿಗೆ ತೋಚಿದಂತೆ ಪೂಜೆ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಗುಳೇದಗುಡ್ಡದ ಪರಮೇಶ್ವರಿ ಹೊಸಮಠ ಹೇಳಿದರು.

ಪಟ್ಟಣದ ಮಹಾಂತೇಶ ನಗರದಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಂಡ ಸಿದ್ಧಾಂತ ಶಿಖಾಮಣಿ ಪಾರಾಯಣ ಹಾಗೂ ವೈದಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಏಕತ್ರ ಪೂಜೆಯಿಂದ ಸಾಧನೆ ಮಾಡಲು ಹಾಗೂ ಜೀವಾತ್ಮ ಪರಮಾತ್ಮನಾಗಲು ಸಾಧ್ಯವಿದೆ. ಇಷ್ಟಲಿಂಗವನ್ನು ಪೂಜೆ ಮಾಡುತ್ತ ಪ್ರಾಣಲಿಂಗವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಇಷ್ಟಲಿಂಗ ಧಾರಣೆಯಿಂದ ಶಿವಸ್ವರೂಪಿ ಆಗುತ್ತೇವೆ’ ಎಂದರು.

10 ದಿನಗಳವರೆಗೆ ಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡಿದ ಪರಮೇಶ್ವರಿ ಹೊಸಮಠ ಅವರನ್ನು ಸನ್ಮಾನಿಸಲಾಯಿತು.

ಗುರುಪಾದಯ್ಯ ಚಟ್ಟಿಮಠ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಚಟ್ಟಿಮಠ, ಜಯಶ್ರೀ ಮಠದ, ಬಿ.ಎಂ.ಅಯ್ಯನಗೌಡರ, ಮಹಾಲಿಂಗಯ್ಯ ಮನ್ನಯ್ಯನವರಮಠ, ವಿ.ಐ.ಪಂಚಕಟ್ಟಿಮಠ, ಎಂ.ಆರ್.ಹಿರೇಮಠ, ಹಣಮಂತ ಗೊಬ್ಬರದ, ಚನ್ನಯ್ಯ ಮಸಗುಪ್ಪಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.