ರಬಕವಿ ಬನಹಟ್ಟಿ: ‘2016ರಿಂದ 2026ವರೆಗೆ ಮಾಜಿ ದೇವದಾಸಿಯರಿಗೆ ಮಂಜೂರಾದ ಮನೆಗಳ ಅಂಕಿ–ಅಂಶ ಮತ್ತು ಪ್ರಗತಿಯ ವರದಿ ಪ್ರಕಟಿಸಬೇಕು’ ಎಂದು ಕರ್ನಾಟಕ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಮಹಾನಂದಾ ದೊಡಮನಿ ಆಗ್ರಹಿಸಿದರು.

ಇಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದರು.

‘ಪ್ರತಿ ವರ್ಷ ಎಷ್ಟು ಫಲಾನುಭವಿಗಳನ್ನು ಗುರುತಿಸಲಾಗಿದೆ, ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ, ಮಂಜೂರಾದ ಪೈಕಿ ಎಷ್ಟು ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ, ಎಷ್ಟು ಮನೆಗಳ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ ಎಂಬ ಮಾಹಿತಿ ಬಹಿರಂಗಪಡಿಸಬೇಕಿದೆ’ ಎಂದರು.

‘ವಸತಿ ಸೌಲಭ್ಯ ಕೋರಿ ಇಲಾಖೆಗೆ ಸಲ್ಲಿಕೆಯಾಗಿರುವ ಅರ್ಜಿಗಳು, ಯೋಜನೆಯಿಂದ ವಂಚಿತರಾದವರ ಸಂಖ್ಯೆ ಮತ್ತು ಮಂಜೂರಾದ ಅನುದಾನದ ಬಗ್ಗೆಯೂ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಸಂತೋಷ ಜಮಖಂಡಿ, ಕಾರ್ಯದರ್ಶಿ ಕಲಾವತಿ ಮಾದರ, ಸದಸ್ಯರಾದ ಮಾಲಾ ಹರಿಜನ ಮತ್ತು ತಂಗೆವ್ವ ರಡ್ಡರಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.