ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ: ಗ್ರಾಮಗಳಿಗೆ ನುಗ್ಗಿದ ನೀರು

Last Updated 14 ಸೆಪ್ಟೆಂಬರ್ 2022, 11:23 IST
ಅಕ್ಷರ ಗಾತ್ರ

ಬಾಗಲಕೋಟೆ: ಘಟಪ್ರಭಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಮುಧೋಳ ತಾಲ್ಲೂಕಿನ ಮಿರ್ಜಿ ಹಾಗೂ ಮಳಲಿ ಗ್ರಾಮಗಳಿಗೆ ನೀರು ನುಗ್ಗಿದೆ.

ಮಿರ್ಜಿ ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಿದ್ದು, 16 ಕುಟುಂಬಗಳ ಸದಸ್ಯರಿಗೆ ಆಶ್ರಯ ನೀಡಲಾಗಿದೆ.

ಯಾದವಾಡ ಸೇತುವೆ ಮುಳುಗಡೆಯಾಗಿದೆ. ಈಗಾಗಲೇ ಮುಧೋಳ ತಾಲ್ಲೂಕಿನ 10 ಹಾಗೂ ರಬಕವಿಬನಹಟ್ಟಿ ತಾಲ್ಲೂಕಿನ ಒಂದು ಬ್ಯಾರೇಜ್ ಮುಳುಗಡೆಯಾಗಿವೆ.

ರೂಗಿ, ಮೆಟಗುಡ್ಡ, ಉತ್ತೂರ, ಒಂಟಗೋಡಿ, ಚನ್ನಾಳ, ರಂಜನಗಿ, ಚನ್ನಾಳ, ಮಲ್ಲಾಪೂರ ಯಾದವಾಡ ಕಡೆ ಹೋಗುವ ರಸ್ತೆ ಮಾರ್ಗ ಕಡಿತ ಗೊಂಡಿದೆ.‌

ಮಿರ್ಜಿ, ಒಂಟಗೋಡಿ, ಅಕ್ಕಿಮರಡಿ, ನಾಗರಾಳ, ಮಳಲಿ, ಚನ್ನಾಳ, ಜಾಲಿಬೆರಿ, ಉತ್ತೂರು, ಜಿರಗಾಳ, ಇಂಗಳಗಿ, ಯಡಹಳ್ಳಿ, ಅಂತಪುರ, ಬುದ್ನಿ ಬಿ.ಕೆ, ಬಿದರಿ, ಮಾಚಕನೂರ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆಯಲ್ಲಿನ ಬೆಳೆಗಳು ನೀರಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT