ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‌ಗೋಲ್ಡ್‌ಮ್ಯಾನ್’ ಹವಾಗೆ ಟ್ರಾಫಿಕ್‌ ಜಾಮ್!

Last Updated 26 ಡಿಸೆಂಬರ್ 2019, 9:44 IST
ಅಕ್ಷರ ಗಾತ್ರ

ಬಾಗಲಕೋಟೆ: ಮೈಮೇಲೆ ಐದು ಕೆ.ಜಿಗೂ ಹೆಚ್ಚು ಚಿನ್ನಾಭರಣ ಧರಿಸಿ, ಸುತ್ತಲೂ 14 ಮಂದಿ ಅಂಗರಕ್ಷಕರನ್ನು ಇಟ್ಟುಕೊಂಡು ಬುಧವಾರ ನಗರದಲ್ಲಿ ಸುತ್ತಾಡಿದ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಈ ಗೋಲ್ಡ್‌ಮನ್ ಸಾರ್ವಜನಿಕರ ಗಮನ ಸೆಳೆದರು. ಅವರ ಮೈಮೇಲಿನ ಚಿನ್ನಾಭರಣ ನೋಡುವ ನೂಕು–ನುಗ್ಗಲಿನಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್‌ಗೂ ಕಾರಣರಾದರು. ಕೊರಳು, ಕೈ ಎಲ್ಲೆಲ್ಲೂ ಆಭರಣಗಳು ಮಿರಿ ಮಿರಿ ಮಿಂಚಿದವು.

ಸಮೀಪದ ತಾಂಡಾವೊಂದರಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬಂದು ನಗರದ ಆರಾಧನಾ ಹೋಟೆಲ್‌ನಲ್ಲಿ ಉಳಿದಿದ್ದ ಈ ಗೋಲ್ಡ್‌ಮನ್,ಭದ್ರತೆಯ ಕಾರಣಕ್ಕೆ ತಮ್ಮ ಗುರುತನ್ನು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಅಪರಿಚಿತರೊಂದಿಗೆ ಮಾತನಾಡಲು ನಿರಾಕರಿಸಿದರು. ಹೋಟೆಲ್‌ನ ಕೊಠಡಿ ಕೂಡ ಸಂಬಂಧಿ ಮುಂಡರಗಿಯ ದೇವಾನಂದ ಪೂಜಾರಿ ಎಂಬುವವರ ಹೆಸರಲ್ಲಿ ಕಾಯ್ದಿರಿಸಲಾಗಿತ್ತು.

ಹೋಟಲ್ ಕೊಠಡಿಯಿಂದ ಸೀದಾ ಸಮೀಪದ ಚೌಧರಿ ಡಿಜಿಟಲ್‌ಗೆ ತೆರಳಿದ ಗೋಲ್ಡ್‌ಮನ್ ಒಂದಷ್ಟು ಫೋಟೊ ತೆಗೆಸಿಕೊಂಡರು. ನಂತರ ಇನ್ನೋವಾ ಕಾರು ಹತ್ತಿ ಬೆಂಗಾವಲು ವಾಹನಗಳೊಂದಿಗೆ ಅಲ್ಲಿಂದ ತೆರಳಿದರು. ಈ ವೇಳೆ ಟ್ರಾಫಿಕ್ ಆಗಿದ್ದಕ್ಕೆ ಯುವಕನೊಬ್ಬ ಆಕ್ಷೇಪ ವ್ಯಕ್ತಪಡಿಸಿದಾಗ ನಗು ನಗುತ್ತಾ ಹತ್ತಿರ ತೆರಳಿದ ಗೋಲ್ಡ್‌ಮ್ಯಾನ್ ಕೈಕುಲಕಿ, ಆತನೊಂದಿಗೆ ಸೆಲ್ಫಿ ತೆಗೆಸಿಕೊಂಡು ಹೊರಟರು.

ಈ ಹಿಂದೆಯೂ ಎರಡು ಬಾರಿ ಸ್ಟುಡಿಯೊಗೆ ಬಂದು ಫೋಟೊ ತೆಗೆಸಿಕೊಂಡಿದ್ದಾರೆ. ಫೋಟೊ ಬಿಲ್‌ ಪಾವತಿಸುವಾಗ ಗೋಲ್ಡ್‌ಮ್ಯಾನ್ ಎಂದೇ ಹೆಸರು ಬರೆಸುತ್ತಾರೆ. ನೈಜ ಹೆಸರು ಗೊತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT