ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಗಣೇಶೋತ್ಸವ: ಎಲ್ಲೆಲ್ಲೂ ಸಂಭ್ರಮ

ಎರಡು ವರ್ಷದ ಬಳಿಕ ಕಳೆಗಟ್ಟಿದ ಚೌತಿ: ವಿವಿಧೆಡೆ ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ
Last Updated 2 ಸೆಪ್ಟೆಂಬರ್ 2022, 6:06 IST
ಅಕ್ಷರ ಗಾತ್ರ

ಬಾಗಲಕೋಟೆ: ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಕಾಣೆಯಾಗಿದ್ದ ಗಣೇಶೋತ್ಸವ ಸಂಭ್ರಮವು ಬುಧವಾರ ನಗರದೆಲ್ಲೆಡೆ ಕಂಡು ಬಂದಿತು.

ನಗರದ ಪ್ರಮುಖ ವೃತ್ತಗಳಲ್ಲಿ, ಮನೆಗಳಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಪೂಜೆ, ಪ್ರಸಾದ ವಿತರಣೆ ಕಾರ್ಯಗಳು ಸಂಭ್ರಮದಿಂದ ನಡೆದವು.

ಗಣೇಶ ಮೂರ್ತಿ ತಯಾರಿಕೆ ಸ್ಥಳದಿಂದ ಬುಧವಾರ ಬೆಳಿಗ್ಗೆ ಟ್ರ್ಯಾಕ್ಟರ್‌ನಲ್ಲಿ ಗಣೇಶ ಮೂರ್ತಿ ಕೂಡಿಸಿಕೊಂಡು, ಮೆರವಣಿಗೆಯಲ್ಲಿ ಮಂಟಪಕ್ಕೆ ತರಲಾಯಿತು. ಮಾರ್ಗದುದ್ದಕ್ಕೂ ಹಾಡಿಗೆ ನೃತ್ಯ ಮಾಡಿದ ಯುವಕರು, ಬಣ್ಣ ಎರಚಾಡಿ, ಗಣಪತಿ ಭಪ್ಪ ಮೊರಯಾ ಘೋಷಣೆ ಕೂಗಿದರು.

ಮಂಟಪದಲ್ಲಿ ಮಂತ್ರ ಪಠಣ, ಪೂಜೆಯೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗಣಪತಿಗೆ ನಮಿಸಲು ಬಂದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಂಟಪಗಳನ್ನು ಭಿನ್ನ, ವಿಭಿನ್ನವಾಗಿ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದವು.

ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವವರೂ, ಹೊಸ ಬಟ್ಟೆ ಧರಿಸಿ, ಗಣೇಶ ಮೂರ್ತಿಯನ್ನು ಹೊತ್ತುಕೊಂಡು ಮನೆಗೆ ತಂದರು. ಆರತಿ ಬೆಳಗಿ ಮೂರ್ತಿಗಳನ್ನು ಮನೆಯೊಳಕ್ಕೆ ಬರಮಾಡಿಕೊಳ್ಳಲಾಯಿತು. ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಿ, ಕರಿಗಡಬು, ಮೋದಕ ಇತ್ಯಾದಿಗಳ ನೈವೇದ್ಯ ಮಾಡಲಾಯಿತು. ಮಧ್ಯಾಹ್ನ ಮನೆಯವರೆಲ್ಲರೂ ಸಿಹಿ ಭೋಜನ ಸವಿದರು.

ಸಂಜೆ ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆಗೆ ಜನರು ಮುಗಿಬಿದ್ದಿದ್ದರು. ಮಳೆರಾಯನೂ ಸಂಜೆ ಬಿಡುವು ನೀಡಿದ್ದನು. ಮನೆಗಳಲ್ಲಿ ಕೂಡಿಸಿದ್ದ ಮೂರ್ತಿಯನ್ನು ಕೆಲವರು ಮೊದಲ ದಿನವೇ ವಿಸರ್ಜನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT