ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣದಲ್ಲಿ ಮುಖ್ಯ ಬಸ್ ನಿಲ್ದಾಣದ ಸುತ್ತ ಹಾಗೂ ಭಂಡಾರಿ ಕಾಲೇಜು ವೃತ್ತ, ಹಳೆಯ ಗುಲಾಬ ಟಾಕೀಸ್ ಸುತ್ತ ಮುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಟ್ಟು 200ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯಲ್ಲಿ ಓಡಾಡುವಾಗ ಮಕ್ಕಳಿಗೆ, ಮಹಿಳೆಯರಿಗೆ, ಯುವಕರಿಗೆ ಕಚ್ಚುತ್ತಿವೆ, ಇವುಗಳನ್ನ ತಡೆಯುವವರು ಯಾರು? ಎಂಬ ಪ್ರಶ್ನೆ ನಾಗರಿಕ ವಲಯದಲ್ಲಿ ಮೂಡಿದೆ.

ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕೋರ್ಟ್ ಆದೇಶವಿದ್ದರೂ ಪಟ್ಟಣದ ಪುರಸಭೆ ಈವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಬೀದಿ ನಾಯಿಗಳ ಸಂತಾನ ಹರಣ ಅಥವಾ ಅವುಗಳಿಗೆ ಸಾರ್ವಜನಿಕ ಸ್ಥಳದಿಂದ ದೂರವಿರಿಸುವ ಕೆಲಸವನ್ನು ಪುರಸಭೆ ಮಾಡಿಲ್ಲ. ಹೀಗಾಗಿ ಪಟ್ಟಣದ ನಾಗರಿಕರು ಪುರಸಭೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಹಾರದ ಕೊರತೆ: ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ಸಿಗದೆ ಹಸಿವಿನಿಂದ ಬಳಲುತ್ತವೆ, ಹಾಗೂ ಜೋರಾಗಿ ಬೊಗಳುತ್ತವೆ. ಸ್ವಲ್ಪ ಆಹಾರ ಸಿಕ್ಕರೂ ತಿನ್ನಲು ಕಚ್ಚಾಡಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತವೆ. ಅಲ್ಲದೇ ರಸ್ತೆಯಲ್ಲಿ ಓಡಾಡುವರ ಮೇಲೆ ಎರಗಿ ಕಚ್ಚುತ್ತವೆ.

ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿದವರಿಗೆ ನಂಜು ಬಾರದ ಹಾಗೆ ಚುಚ್ಚುಮದ್ದು ನೀಡುತ್ತಿದ್ದು, ದಾಖಲೆ ಪ್ರಕಾರ ವರ್ಷಕ್ಕೆ 700ಕ್ಕೂ ಅಧಿಕ ಜನರಿಗೆ ಬೀದಿ ನಾಯಿಗಳು ಕಚ್ಚಿವೆ.

‘ರಸ್ತೆಯಲ್ಲಿ ಬೈಕ್ ಸವಾರರು ಓಡಾಡುವುದೇ ಕಷ್ಟವಾಗಿದೆ, ಎಲ್ಲೆಂದರೆಲ್ಲಿ ಬೀದಿನಾಯಿಗಳು ಅಡ್ಡ ಬರುತ್ತವೆ. ಆಗ ಬೈಕ್ ಸವಾರರು ಬಿದ್ದು ನಾಯಿ ಕಚ್ಚಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಪುರಸಭೆ ಇದಕ್ಕೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ಗುಳೇದಗುಡ್ಡದ ನಿವಾಸಿ ಶ್ರೀಕಾಂತ ಹುನಗುಂದ.

‘ಸರ್ಕಾರದ ನಿರ್ದೇಶನದಂತೆ ಬೀದಿ ನಾಯಿಗಳಿಗೆ ಸಂತಾನಹರಣ ಮತ್ತು ಅವುಗಳನ್ನು ಹಿಡಿದು ಒಂದೆಡೆ ಹಾಕಲು ಬಾಗಲಕೋಟೆ ಮತ್ತು ಜಮಖಂಡಿಯಲ್ಲಿ ಎರಡು ಘಟಕ ತೆರೆದಿದ್ದು ಅದಕ್ಕೆ ಟೆಂಡರ್ ಕರೆಯಲಾಗಿದೆ. ಶೀಘ್ರ ಬೀದಿ ನಾಯಿ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು’ ಎಂದು ಗುಳೇದಗುಡ್ಡ ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-869627912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.