ಗುಳೇದಗುಡ್ಡ: ಪಟ್ಟಣದ ಮಹಾದೇವ ಜಗತಾಪ ಜಮೀನಿನಲ್ಲಿ ಇರುವ ತಾಯಮ್ಮ ದೇವಿ ಬಡಾವಣೆಯಲ್ಲಿ ಭೂಮಿ ತಾಯಮ್ಮದೇವಿಯ ಯುಗಾದಿ ಉತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.

ತಾಯಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಯುಗಾದಿ ಉತ್ಸವವನ್ನು ಶ್ರದ್ಧಾ, ಭಕ್ತಿಯಿಂದ ನೆರೆವೇರಿಸಲಾಗುತ್ತದೆ. ಯುಗಾದಿ ಮುಗಿದ ಬಳಿಕ ಮೊದಲು ಬರುವ ಮಂಗಳವಾರ ಅಥವಾ ಶುಕ್ರವಾರದಂದು ಅನ್ನ ಸಂತರ್ಪಣೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುವುದರ ಮೂಲಕ ಯುಗಾದಿ ಉತ್ಸವ ನಡೆಸಲಾಗುತ್ತದೆ.

ಜನಪದ ದೇವತೆ ತಾಯಮ್ಮ ದೇವಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಬಳಿಕ ಈ ಭಾಗದ ಸಾರ್ವಜನಿಕರು, ಭಕ್ತರು ತಾಯಮ್ಮ ದೇವಿಗೆ ವಿಶೇಷ ಸಿಹಿ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು.

ಯುಗಾದಿ ಉತ್ಸವದ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕೈಗೊಳ್ಳಲಾಗಿತ್ತು. ಕಮತಗಿ ರಸ್ತೆಗೆ ಹೊಂದಿಕೊಂಡಿರುವ ತಾಯಮ್ಮ ದೇವಿ ಬಡಾವಣೆಯಲ್ಲಿನ ಈಶ್ವರ, ಬಸವಣ್ಣ ದೇವಸ್ಥಾನದಿಂದ ಡೊಳ್ಳು, ಕರಡಿ ಮಜಲು ವಾದ್ಯ ಮೇಳದೊಂದಿಗೆ ಕುಂಭ ಕಳಸಾರಥಿಯ ಮೂಲಕ ಭೂಮಿ ತಾಯಮ್ಮ ದೇವಸ್ಥಾನದವರೆಗೆ ಸಂಭ್ರಮದ ಮೆರವಣಿಗೆಯನ್ನು ನಡೆಸಲಾಯಿತು. ಮಹಿಳೆಯರು ಕುಂಭಕಳಸಾರಥಿಯೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಯಲಗೂರದಪ್ಪ ಗೌಡ್ರ, ಮಹದೇವ ಜಗತಾಪ, ರಾಮಣ್ಣ ಕುಂಬಾರ, ಲಕ್ಷ್ಮಣ್ ಜಮ್ಮನಕಟ್ಟಿ, ಮಲ್ಲಪ್ಪ ಹುಲಗೇರಿ, ಚನ್ನಪ್ಪ ತಗ್ಗಿನಮಣಿ, ದೀಪಕ ಜಗತಾಪ, ಸಂಗಪ್ಪ ಹುನಗುಂದ, ತಿಪ್ಪಣ್ಣ ನಿಡಗುಂದಿ, ಸಿದ್ದು ಕಲ್ಲೂರ, ಗುರುಪಾದಪ್ಪ ಹೂಲಗೇರಿ, ಮಲ್ಲಪ್ಪ ಕೊನ್ನೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-19-1994322951

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.