ಗುಳೇದಗುಡ್ಡ: ‘ಈ ವರ್ಷ ಗುಡುಗು ಸಿಡಿಲಿನ ಮಳೆಯ ಆರ್ಭಟ ಹೆಚ್ಚಾಗುತ್ತದೆ. ಉತ್ತಮವಾದ ಮಳೆಯಿಂದ ಕೆರೆ, ಕಟ್ಟೆ, ಬಾವಿ, ನದಿಗಳು ಸಂಪೂರ್ಣವಾಗಿ ತುಂಬಿ ತುಳುಕುತ್ತವೆ. ಈ ವರ್ಷ ಸಮೃದ್ಧಿಯ ಕಾಲವಾಗುತ್ತದೆ’ ಎಂದು ನಾಗಪ್ಪ ಚಿಂದಿ ಹೇಳಿದರು.

ಪಟ್ಟಣದ ಮಾರವಾಡಿ ಬಗೀಚ್ನಲ್ಲಿ ಗುರುವಾರ ಬೆಳಿಗ್ಗೆ ಯುಗಾದಿ ಭವಿಷ್ಯ ಫಲದ ಹೇಳಿಕೆ ಹೇಳಿದರು.

ಕೃಷಿ ಕೆಲಸ ಚೆನ್ನಾಗಿ ನಡೆಯುತ್ತವೆ. ದೇಶದ ಜನರಿಗೆ ಅನ್ನದ ಕೊರತೆಯಾಗುವುದಿಲ್ಲಾ. ಗುಳೇದಗುಡ್ಡದ ಖಣಕ್ಕೆ ಬೇಡಿಕೆ ಬರುತ್ತದೆ ಒಟ್ಟಾರೆ ಬಟ್ಟೆ ವ್ಯಾಪಾರ ಭರ್ಜರಿಯಾಗುತ್ತದೆ ಎಂದು ಹೇಳಿದರು.

ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮಕ್ಕೆ ಶತಮಾನದ ಇತಿಹಾಸವಿದೆ. ಇಲ್ಲಿ ಮಳೆ, ಬೆಳೆ, ವ್ಯಾಪಾರ, ವಹಿವಾಟು ಹೀಗೆ ವರ್ಷದ ಭವಿಷ್ಯ ಹೇಳಲಾಗುತ್ತದೆ. ಹಿಂದಿನ ದಿನದ ರಾತ್ರಿಯೇ ಬಗೀಚ್ನಲ್ಲಿ ಸುಮಾರು 20 ಅಡಿ ಚೌರಸ್ ಸ್ಥಳವನ್ನು ಹೇಳಿಕೆಗೆ ಸಿದ್ಧಗೊಳಿಸಿ ಸುತ್ತಲೂ ಜೋಳದ ದಂಟಿನಿಂದ ಬೇಲಿ ಹಾಕಲಾಗಿರುತ್ತದೆ.

ಒಳಗಡೆ ಒಂದುಕಡೆ ರೈತ ಹೊಲ ಉಳುಮೆ ಮಾಡುವ ಮಣ್ಣಿನ ಮೂರ್ತಿಯನ್ನು, ಖಣದ ಬಟ್ಟೆಗಳನ್ನು, ಇತರೆ ಬಣ್ಣಬಣ್ಣದ ಬಟ್ಟೆಗಳನ್ನು ಅಲ್ಲಲ್ಲಿ ಹಾಕಲಾಗಿರುತ್ತದೆ. ಮಧ್ಯದಲ್ಲಿ ಮಣ್ಣಿನಿಂದ ಗದ್ದುಗೆ ಮಾಡಿ ಅದರಲ್ಲಿ ದ್ವಿದಳ ಧಾನ್ಯಗಳನ್ನು ಹಿಂದಿನ ದಿನವೇ ರಾತ್ರಿ ಮುಚ್ಚಿಟ್ಟು ಅದರ ಹತ್ತಿರ ಎಕ್ಕಿ ಎಲೆಗಳನ್ನು ಇಟ್ಟಿರುತ್ತಾರೆ. ಮರುದಿನ ಬೆಳಿಗ್ಗೆ ಇವುಗಳ ಲಕ್ಷಣ ನೋಡಿ ಭವಿಷ್ಯ ಹೇಳುವುದು ಒಂದು ವಾಡಿಕೆ. ಬೆಳಗಿನಜಾವ ಈ ಸ್ಥಳದಲ್ಲಿ ರತ್ನಪಕ್ಷಿ ಕಂಡ ನಂತರವೇ ಭವಿಷ್ಯ ಹೇಳಲು ಆರಂಭಿಸುವುದು ವಿಶೇಷವಾಗಿದೆ. ಮಾಗುಂಡಪ್ಪ ಚಿಂದಿ, ಮಲ್ಲೇಶಪ್ಪ ಶೀಪರಿ, ಶಂಕರ ರಂಜಣಗಿ, ಪ್ರಶಾಂತ ರಂಜಣಗಿ, ಈರಣ್ಣ ಹಟ್ಟಿ, ಸಂಗಣ್ಣ ಚಿಕ್ಕಾಡಿ, ಶ್ರೀಕಾಂತ ಹುನಗುಂದ, ಮೋಹನ ಕರನಂದಿ ಇದ್ದರು.

ಮಹಾಲಿಂಗಪುರ: ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುಗಾದಿ ಆರಂಭದ ದಿನವಾದ ಗುರುವಾರ ಬೆಳಗಿನ ಜಾವ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀ ಜಟೋತ್ಸವ ನೆರವೇರಿಸಿದರು.

ಯುಗಾದಿಯ ಪಾಡ್ಯ, ಹಿಂದೂಗಳ ವರ್ಷದ ಪ್ರಥಮ ದಿನ ನಡೆಯುವ ಜಟೋತ್ಸವ ವೀಕ್ಷಣೆ ಮಾಡುವುದೇ ಪುಣ್ಯ ಎಂದು ಭಕ್ತರು ನಂಬಿದ್ದಾರೆ. ಹೀಗಾಗಿ, ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬೆಳಗಿನ ಜಾವ ಆಗಮಿಸಿ ಜಟೋತ್ಸವ ದರ್ಶನ ಮಾಡಿ ಪುನೀತರಾದರು.

ಜಟೋತ್ಸವ ಹಿನ್ನೆಲೆ ಮಹಾಲಿಂಗೇಶ್ವರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-19-1202554037

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.