ಗುಳೇದಗುಡ್ಡ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಬುಧವಾರ ಪಟ್ಟಣದ ಸಾಲೇಶ್ವರ ದೇವಸ್ಥಾನದ ಹತ್ತಿರ ಹದಿ ಹರಿಯದ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು.

ಸ್ನೇಹ ಕ್ಲಿನಿಕ್ ವಿಭಾಗದ ಆಪ್ತ ಸಮಾಲೋಚಕರಾದ ಜಯಶ್ರೀ ಕಳಸಾ ಮಾತನಾಡಿ, ‘ರಾಷ್ಟ್ರೀಯ ಕಿಶೋರ ಸ್ವಾಸ್ಥ ಯೋಜನೆಯಡಿ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ, ಸಾಮಾಜಿಕ ಮತ್ತು ಭಾವನಾತ್ಮಕ ಬದಲಾವಣೆ, ಪೌಷ್ಟಿಕ ಆಹಾರ, ಋತುಚಕ್ರ ಸಮಸ್ಯೆ , ಲೈಂಗಿಕ ಸಮಸ್ಯೆ, ಕಲಿಕಾ ಸಮಸ್ಯೆ ,ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯಿಂದಾಗುವ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಪರಿಹಾರೋಪಾಯ ಮಾರ್ಗಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ’ ಎಂದರು.

ಆರೋಗ್ಯ ತಪಾಸಣೆ ಶಿಬಿರದಲ್ಲಿ ಒಟ್ಟು 40 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು, ಅದರಲ್ಲಿ ಎಂಟು ಮಕ್ಕಳನ್ನು ಹೆಚ್ಚಿನ ಆರೋಗ್ಯ ಸೇವೆಗೆ ಶಿಫಾರಸು ಮಾಡಲಾಯಿತು.

ಮಕ್ಕಳ ತಜ್ಞರಾದ ಡಾ.ಕವಿತಾ ನಾಗರಾಜ್ ಕುರಿ, ವೈದ್ಯಾಧಿಕಾರಿಗಳಾದ ಡಾ.ಕೆ.ಟಿ.ಗಾಜಿ, ಡಾ.ಜ್ಯೋತಿ ಶಿವನಾಯಕ, ನೇತ್ರಾಧಿಕಾರಿ ಅನು ಐಹೊಳೆ, ಪ್ರೀತಿ ಬೆಳಗಲ್ಲ ಸೇರಿದಂತೆ ಆರೋಗ್ಯ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-19-1881288755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.