ಗುಳೇದಗುಡ್ಡ : ಅತ್ಯಂತ ಕಡು ಬಡತನದಲ್ಲಿ ನೇಕಾರಿಕೆ ಉದ್ಯೋಗವನ್ನು ಮಾಡುತ್ತಾ ನೇಕಾರಿಕೆಯನ್ನು ಕಲಿಸಿ ಕೊಡುವುದರ ಜೊತೆಗೆ ನೆರೆಹಾವಳಿ, ಬರಗಾಲ ಮುಂತಾದ ಸಂದರ್ಭದಲ್ಲಿ ಜನರಿಗೆ ಆಸರೆಯಾಗಿ ಕಾರ್ಯನಿರ್ವಹಿಸಿದ ರಂಗಪ್ಪನವರ ಸಾರ್ಥಕ ಜೀವನ ಶ್ರೇಷ್ಠವಾಗಿದೆ. ಮಾಡಿರುವ ಜನಹಿತ ಕೆಲಸ ಶಾಶ್ವತವಾಗಿ ಉಳಿಯಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು

ಮಂಗಳವಾರ ಪಟ್ಟಣದ ಕರನಂದಿಯವರ ರಂಗಮಂದಿರದಲ್ಲಿ ಜರುಗಿದ ರಂಗಪ್ಪ ಶೇಬಿನಕಟ್ಟಿ ಅವರ ನೋವುಂಡು ನಲಿದವರು ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಸಹಸ್ರಚಂದ್ರ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಗ್ರಂಥಗಳು ವ್ಯಕ್ತಿಯ ವ್ಯಕ್ತಿತ್ವದ ಕೈಗನ್ನಡಿಯಾಗಿದೆ. ರಂಗಪ್ಪನವರ ವ್ಯಕ್ತಿತ್ವ, ಸಮಾಜ ಸೇವೆಯ ಎಲ್ಲಾ ಆಯಾಮಗಳನ್ನು ಗ್ರಂಥದ ಮೂಲ ಹೊರತಂದಿರುವುದು ಸಂತೋಷದಾಯಕ ಎಂದರು.

ಭಾರತೀಯ ಶಿಕ್ಷಣ ಮಂಡಳದ ವಕ್ತಾರರಾದ ಶಂಕರಾನಂದ ಜೀ ಮಾತನಾಡಿ, ರಂಗಪ್ಪನವರ ವ್ಯಕ್ತಿತ್ವ ವಿಶಿಷ್ಟವಾಗಿದೆ. ಅವರದು ಬೆಂಕಿಯಲ್ಲಿ ಅರಳಿದ ಹೂ. ಇವರು ಸದಾ ಇನ್ನೊಬ್ಬರ ಕಷ್ಟಕ್ಕೆ ಮಿಡಿಯವರಾಗಿದ್ದಾರೆ.ಇಂಥವರ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಅಂತವರನ್ನ ಗೌರವಿಸುವ ಕೆಲಸ ಮಾಡಿದ್ದು ಉತ್ತಮವಾದ ಕಾರ್ಯವಾಗಿದೆ ಎಂದು ಹೇಳಿದರು

ಸಂಸದ ಪಿಸಿ..ಗದ್ದಿಗೌಡರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಟುಂಬದ ನಡುವೆ ಸಮಾಜ ಸೇವೆ ಮಾಡುವ ಇವರ ಆದರ್ಶ ನಡೆ ಮುಂದಿನ ಪೀಳಿಗೆ ಅನುಸರಿಸಲು ಮಾದರಿಯಾಗಿದೆ ಎಂದು ಹೇಳಿದರು.

ಆರಂಭದಲ್ಲಿ ರಂಗಪ್ಪ ಶೇಬಿನಕಟ್ಟಿ ಗ್ರಂಥ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಶೀಲವಂತ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದ ಪುರಿ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು ಪಟ್ಟಣದ ಗುರುಸಿದ್ದೇಶ್ವರ ಬ್ರಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ ರಂಗಪ್ಪನವರ ಸರಳ ಜೀವನ ಉದಾತ್ತ ಚಿಂತನೆ ಇವರದು ಪರರ ಕಷ್ಟಗಳಿಗೆ ಸ್ಪಂದಿಸುತ್ತಾ ಜೀವನವನ್ನು ಮಾಡಿದವರು ಅಂಥವರ ಆದರ್ಶ ಸಮಾಜಕ್ಕೆ ಮಾದರಿ ಎಂದರು.

ವಿ.ಎ.ಬೆನಕನಾಳ ಅವರ ರಾಷ್ಟ್ರ ನೇತಾರ ಅಟಲ್ ಬಿಹಾರಿ ವಾಜಪೇಯಿ, ಎಸ್.ವಿ.ಚವಡಾಪುರ ಅವರು ಆಂಗ್ಲ ಆವೃತ್ತಿಲ್ಲಿ ರಚಿಸಿದ ದೇವರ ದಾಸಿಮಯ್ಯನವರ ಆಯ್ದ 50 ವಚನಗಳ ಕೃತಿಗಳು ಬಿಡುಗಡೆಗೊಂಡವು. ನಂತರ ಮಂಗಲ ನಿಧಿ ಸಮರ್ಪಣಾ ಕಾರ್ಯಕ್ರಮ ಜರುಗಿತು, ರಂಗಪ್ಪ ಶೇಬಿನಕಟ್ಟೆ ಅವರನ್ನು ಅಭಿನಂದನಾ ಗ್ರಂಥ ಸಮಿತಿಯ ಪರವಾಗಿ ಗೌರವಿಸಲಾಯಿತು ನಂತರ ವಿವಿಧ ಸಂಘ ಸಂಸ್ಥೆಗಳು ಅವರನ್ನ ಗೌರವಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-19-1498515880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.