ಗುಳೇದಗುಡ್ಡ: ಯುಗಾದಿ ಹಬ್ಬ ಹೊಸವರ್ಷ, ಹೊಸತನದೊಂದಿಗೆ ಮಳೆಗಳು ಆರಂಭ ಪ್ರಸ್ತುತ ಒಂದು ವಾರದಿಂದ ಮುಂಗಾರು ಮಳೆ ಆಗುತ್ತಿದ್ದು, ರೈತರಿಗೆ ಹರ್ಷವನ್ನುಂಟು ಮಾಡಿದೆ.

ಉತ್ತಮ ನಕ್ಷತ್ರದ ದಿನದಂದು ರೈತರು ಆಯ ಗ್ರಾಮದ ಬಡಿಗೇರರ ಹತ್ತಿರ ಹೋಗಿ ಹೊಸ ಕೂರಿಗೆ ರೈತರು ಸಿದ್ದಪಡಿಸಿದ್ದಾರೆ. ತಾಲ್ಲೂಕಿನ ಕೋಟೆಕಲ್, ಲಕ್ಕಸಕೊಪ್ಪ, ಹಾನಾಪೂರ ಎಸ್.ಪಿ ಮುಂತಾದ ಗ್ರಾಮಗಳಲ್ಲಿ ಮುಂಗಾರು ಬಿತ್ತನೆಗೆ ಸಕಲ ಸಿದ್ದತೆಗಳು ನಡೆದಿವೆ.

ತಾಲ್ಲೂಕಿನ ಎಲ್ಲ 38 ಹಳ್ಳಿಗಲಲ್ಲೂ ಸಮೃದ್ದ ಮುಂಗಾರು ಮಳೆಯಾಗಿದೆ. ರೈತರು ಹೊಲ ಹದಗೊಳಿಸಿದ್ದು, ಸದ್ಯ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ಕೊಟ್ನಳ್ಳಿ ಗ್ರಾಮದ ರೈತ ಶಿವಪ್ಪ ಹಾದಿಮನಿ ಹೇಳುತ್ತಾರೆ.

ಕೃಷಿ ಇಲಾಖೆ ಸಿದ್ದತೆ: ತಾಲ್ಲೂಕಿನ ಕೃಷಿ ಇಲಾಖೆಯು ಮುಂಗಾರು ಪೂರ್ವ ಮಳೆ ಸಮೃದ್ಧವಾಗಿ ಆಗಿದ್ದರಿಂದ 2025-26ನೇ ಸಾಲಿನ ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜಗಳಾದ, ಹೆಸರು, ತೊಗರಿ, ಸಜ್ಜೆ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಮೆಕ್ಕೆಜೋಳ ದಾಸ್ತಾನು ಮಾಡಿ ರೈತರಿಗೆ ವಿತರಿಸುತ್ತಿವೆ.

ಬಿತ್ತನೆ ಕ್ಷತ್ರದ ಗುರಿ: 2025-26ನೇ ಸಾಲಿನ ಮುಂಗಾರು ಹಂಗಾಮಿಗರ 13,605 ಹೆಕ್ಷೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮತ್ತು ವಿತರಿಸುವ ಕಾರ್ಯ ಭರದಿಂದ ಸಾಗಿದೆ.

ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಬಿತ್ತನೆ ಬೀಜಗಳ ಮಾಹಿತಿ ನೀಡುತ್ತಿದ್ದು.ರೈತರು ಕೇವಲ ಡಿಎಪಿ, ಯೂರಿಯಾ ಪೊಟ್ಯಾಷ್ ಇವುಗಳೊಂದಿಗೆ ರಂಜಕ, ಯೂರಿಯಾದಲ್ಲಿ ಸಾರಜನಕ, ಪೊಟ್ಯಾಷ್ ನಲ್ಲಿ ಪೋಬ್ಯಾಸಿಯಂ ಆಕ್ಸೈಡ್ ಇರುವ ಹಾಗೆ ನೋಡಿಕೊಳ್ಳಬೇಕು ಹಾಗೂ ಲಘು ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.

‘ಪ್ರಸ್ತುತ ನ್ಯಾನೋ ಟೆಕ್ನಾಲಜಿ ಕೃಷಿ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದು ನ್ಯಾನೋ ಯೂರಿಯಾ ಹಾಗೂ ನ್ಯಾನೂ ಡಿಎಪಿಗಳನ್ನು ಬೆಳೆಬೆಳೆದು 15 ದಿನಗಳ ನಂತರ ಬಳಸಬಹುದು. ಎಲ್ಲ ಮುಂಗಾರು ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಇದ್ದು ರೈತರು ದಾಖಲೆ ನೀಡಿ ಪಡೆಯಬಹುದು’ ಆನಂದ ಗೌಡರ ತಾಲ್ಲೂಕು ಕೃಷಿ ಅಧಿಕಾರಿ,ಗುಳೇದಗುಡ್ಡ

ಉತ್ತಮ ಹಾಗೂ ಹದವಾಗಿ ಮಳೆ ಆಗಿದ್ದು ಮುಂಗಾರು ಬಿತ್ತನೆ ಕಾರ್ಯ ಆರಂಭಿಸುತ್ತಿದ್ದೇವೆ. ಇದು ಸೂಕ್ತವಾದ ಬಿತ್ತನೆ ಕಾಲಾವಧಿಯಾಗಿದೆ
ತಿಪ್ಪಣ್ಣ ಗೌಡ ಸಾವಯವ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.