ಗುಳೇದಗುಡ್ಡ: ಅಧಿಕ ಮಾಸ ಬಹಳ ಶ್ರೇಷ್ಠವಾದ ಮಾಸವಾಗಿದೆ. ದೇವರಿಗಾಗಿ ಮೀಸಲಿರುವ ಮಾಸವಾಗಿದೆ. ಈ ಮಾಸದಲ್ಲಿ ಪ್ರತಿಯೊಬ್ಬರು ದೇವರು, ಪೂಜೆ ಪುನಸ್ಕಾರದಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅಮರೇಶ್ವರ ಬೃಹನ್ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿದರು.

ಅವರು ಪಟ್ಟಣದ ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ನಿಮಿತ್ತ ಭಾನುವಾರ ನಡೆದ ಮೌನಾನುಷ್ಠಾನ, ಹಾಗೂ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದರು.

ಶ್ರೀಮಠದ ಪೀಠಾಧ್ಯಕ್ಷ ಅಭಿನವ ಒಪ್ಪತ್ತೇಶ್ವರ ಶ್ರೀಗಳು ಮಾತನಾಡಿ, ಅಧಿಕ ಮಾಸ ಬಹಳ ಶ್ರೇಷ್ಠವಾಗಿದೆ. ಮೂರು ವರ್ಷಗಳಿಗೊಮ್ಮೆ ಇದು ಬರಲಿದ್ದು, ದೇವತಾ ಕಾರ್ಯಗಳಿಗೆ ಬಹಳ ಪ್ರಾಶಸ್ತ್ಯವಾದ ಮಾಸವಾಗಿದೆ ಎಂದರು.

ಜಿ.ಎಸ್.ದೇಸಾಯಿ ಮಾತನಾಡಿ ದರು. ಶ್ಯಾಮಣ್ಣ ಪತ್ತಾರ, ಬಸವರಾಜ ಅಬ್ಬಿಗೇರಿ ಇವರಿಂದ ಸಂಗೀತ ಸೇವೆ ನಡೆಯಿತು. ಸಂಗಪ್ಪ ಹಡಪದ, ಸಂಗಪ್ಪ ಜವಳಿ,ರಂಗಪ್ಪ ಅರಮನ್ನವರ, ನೀಲಪ್ಪ ಅಬಕಾರಿ, ಸಂಗಪ್ಪ ಆಲೂರ, ಮುತ್ತಪ್ಪ ಅಬಕಾರಿ, ಮಹಾಂತೇಶ ಹಿರೇಮಠ, ಹನಮಂತ ವಾರಿ, ಬಸವರಾಜ ಚಿಕ್ಕನರಗುಂದ, ಶಿವಾನಂದ ಮಳ್ಳಿಮಠ, ಯಲಗೂರೇಶ ಅರಮನಿ, ಹುಚ್ಚೇಶ ಕಮತರ, ಅಶೊಕ ರೋಜಿ, ಹುಚ್ಚಪ್ಪ ಅಬಕಾರಿ, ಪರಸಪ್ಪ ಆಲೂರ, ಈರಯ್ಯ ಬೂದಿಹಾಳಮಠ, ಕಾಜಗಾರ, ಈರಣ್ಣ ಕವಡಿಮಟ್ಟಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-19-1644569696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.