ಗುಳೇದಗುಡ್ಡ: ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಿರಲಿ ಎಂದು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಕುಡಿಯುವ ನೀರಿನ ಅರವಟಿಗೆಗಳನ್ನು ಬುಧವಾರದಿಂದ ಆರಂಭಿಸಿದ್ದಾರೆ.

ಬಾಲಾಜಿ ಗುಡಿ ಹತ್ತಿರದ ಗಚ್ಚಿನಕಟ್ಟೆ, ಕಂಠಿಪೇಟೆ, ಭಂಡಾರಿ ಕಾಲೇಜ್ ಹತ್ತಿರ ಆಟೊ ನಿಲ್ದಾಣ, ಹರದೊಳ್ಳಿ ಹಣಮಂತದೇವರ ಗುಡಿಕಟ್ಟಿ ಈ ನಾಲ್ಕು ಕಡೆಗಳಲ್ಲಿ ಆರಂಭಿಸಿದ್ದು ನಂತರ ಪಟ್ಟಣದ ಬಸ್ ನಿಲ್ದಾಣದಲ್ಲಿ, ಭಾರತ ಮಾರ್ಕೆಟ್ ಹಾಗೂ ಪುರಸಭೆ ಆವರಣದಲ್ಲಿ ಆರಂಭಿಸುವುದಾಗಿ ಪುರಸಭೆ ಕುಡಿಯುವ ನೀರಿನ ಸರಬರಾಜು ಮೇಲ್ವಿಚಾರಕ ಮುಸ್ತಾಫ್ ಕೊತ್ವಾಲ್ ತಿಳಿಸಿದ್ದಾರೆ.

ಈ ಕಾರ್ಯಕ್ಕೆ ಪುರಸಭೆಯಿಂದ ಒಬ್ಬ ಸಿಬ್ಬಂದಿ ನೇಮಿಸಲಾಗಿದ್ದು, ಫಿಲ್ಟರ್ ನೀರು ಪೂರೈಸಲಾಗುತ್ತದೆ. ಪ್ರತಿದಿನ ಆಯಾ ಸ್ಥಳಗಳಿಗೆ ಗಂಟೆಗೊಮ್ಮೆ ನೀರು ಪೂರೈಸಲಾಗುತ್ತದೆ. ನೀರಿನ ಅರವಟಿಗೆಯ ಮಣ್ಣಿನ ಗಡಿಗೆಯಲ್ಲಿ ನೀರು ಖಾಲಿಯಾಗದಂತೆ ಕ್ರಮ ವಹಿಸಲಾಗುತ್ತದೆ. ಇದಕ್ಕಾಗಿಯೇ ಕುಮಾರ ತಟ್ಟಿಮಠ, ಮುರಳಿ, ಗಣೇಶ ಮಾದರ, ದುರ್ಗಪ್ಪ ಮಾದರ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಪಟ್ಟಣ ಹಾಗೂ ಸುತ್ತಲ ಗ್ರಾಮಗಳಿಂದ ಬರುವ ಸಾರ್ವಜನಿಕರಿಗೆ ಕುಡಿಯಲು ಉಚಿತ ಶುದ್ಧ ನೀರಿನ ಪೂರೈಕೆ ಮಾಡಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-1150021981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.