ಗುಳೇದಗುಡ್ಡ: ತಾಲ್ಲೂಕಿನ ಮಂಗಳಗುಡ್ಡ ಮಂಗಳಾದೇವಿ ಜಾತ್ರಾ ಮಹೋತ್ಸವ ಮಾರ್ಚ್ 22ರಿಂದ ಏ.9 ರವರೆಗೆ ಅದ್ಧೂರಿಯಾಗಿ ನಡೆಯಲಿದೆ.

22ರಂದು ಭಾನುವಾರ ಮಂಗಳಗುಡ್ಡ, ಪಟ್ಟಕಲ್ಲ, ಬಾಚಿನಗುಡ್ಡ, ಕರಡಿಗುಡ್ಡ, ಬೂದನಗಡ, ಸಬ್ಬಲಹುಣಸಿ, ಅಮೀನಗಡ, ಚಿಮ್ಮಲಗಿ, ಗೋನಾಳ, ಶೀರಬಡಗಿ, ಮಂಗಳೂರು ಈ ಎಲ್ಲ ಗ್ರಾಮಗಳ ಭಕ್ತರು ಸಿಡಿಕಂಬ ಕಡಿಯುವ ಕಾರ್ಯಕ್ರಮ ನಡೆಸಿಕೊಟ್ಟರು.

30ರಂದು ದೇವರ ಜಾತ್ರೆ, 31ರಂದು ಗರುಡಪಟ ಕಟ್ಟುವದು (ಅಂಕಿ ಹಾಕುವದು), ಏ.1 ರಂದು ಮಂಟಪ ನಿರ್ಮಾಣ, ಪಟ್ಟದಕಲ್ಲಿನ ರಘುವೀರ ದೇಸಾಯಿ, ಪಟ್ಟದಕಲ್ಲ ಗೌಡ್ರು, ಚಿಮ್ಮಲಗಿ, ಕಾಟಾಪೂರದ ಗೌಡ್ರು ಬಂಧುಗಳು, ಭಕ್ತರಿಂದ ದೇವಿಗೆ ವಸ್ತ್ರಾಭರಣ, ಉಡಿ ತುಂಬುವ ಕಾರ್ಯಕ್ರಮ, ನಂದಿಕೇಶ್ವರ ಭಕ್ತರಿಂದ ದೇವಿಗೆ ಹೂವಿನ ಮಾಲೆ ರಥೋತ್ಸವದ ಸೇವೆ, ಕಳಸದ ಮೆರವಣಿಗೆ ನಡೆದು, ಸಂಜೆ 5:35ಕ್ಕೆ ರಥೋತ್ಸವ ನಡೆಯಲಿದೆ.

ಏ.2, 3 ರಂದು ಸಂಜೆ 4ಗಂಟೆಗೆ ಕುಸ್ತಿ ನಡೆಯಲಿದೆ. 3 ರಂದು ತಳ್ಳಿಕೇರಿ, ಚಿಮ್ಮಲಗಿ ಭಕ್ತರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, 5ರಂದು ಕಳಸಾರೋಹಣ, 7ರಂದು ರಂಗ ಕಡೆವಾರ, ಮಂಗಳಗುಡ್ಡ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಭಕ್ತರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಏ.9 ರಂದು ಬೆಳಿಗ್ಗೆ ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ಶ್ರೀದೇವಿಯು ಗ್ರಾಮ ಪ್ರವೇಶ ಮಾಡುವಳು ಎಂದು ಮಂಗಳಾದೇವಿ ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-19-1289576697

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.