ಗುಳೇದಗುಡ್ಡ: ಪಟ್ಟಣದ ಬಸವೇಶ್ವರ ನಗರದಲ್ಲಿ ಹಳೆ ಶಕ್ತಿ ಟಾಕೀಸ್ ರಸ್ತೆಯಿಂದ ಸ್ಮಶಾನದ ಮುಖ್ಯ ರಸ್ತೆಯಿಂದ ಕೃಷ್ಣ ಯೋಗಾಶ್ರಮದವರೆಗೆ ಪುರಸಭೆಯಿಂದ ಸಿಸಿ ರಸ್ತೆ ನಿರ್ಮಿಸಲು ರಸ್ತೆ ಅಗೆಯಲಾಗಿದೆ. 15 ದಿನಗಳಾದರೂ ಇದುವರೆಗೂ ರಸ್ತೆ ನಿರ್ಮಾಣ ಮಾಡಲು ಗುತ್ತಿಗೆದಾರರು ಬಂದಿಲ್ಲ. ರಸ್ತೆ ನಿರ್ಮಾಣಕ್ಕೆ ಪುರಸಭೆಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.

ಸಾರ್ವಜನಿಕ ವಾಹನಗಳು, ಬೈಕ್, ಇತರ ವಾಹನಗಳು ಸಂಚರಿಸಲು ಸಾಧ್ಯವಾಗದೇ ತುಂಬಾ ದೂರ ಹೋಗಿ ಮುಖ್ಯರಸ್ತೆಗೆ ಹೋಗಬೇಕಾಗುತ್ತದೆ. ಮಾರುಕಟ್ಟೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊತ್ತು ಮುಳುಗುವುದರೊಳಗೆ ಪಟ್ಟಣದ ಬಸವೇಶ್ವರನಗರದ ಜನರು ಮನೆ ಸೇರುವಂತಾಗಿದೆ. ಕತ್ತಲಾದರೆ ರಸ್ತೆ ದಾಟುವುದೇ ಕಷ್ಟವಾಗಿದೆ. ಆಕಸ್ಮಾತ್ ದೊಡ್ಡ ಮಳೆ ಬಂದರೆ ನೀರು ನಿಲ್ಲುತ್ತದೆ ಹರಿದು ಹೋಗಲು ಸಾಧ್ಯವಾಗುವುದಿಲ್ಲ. ಆದಷ್ಟು ಬೇಗ ರಸ್ತೆ ನಿರ್ಮಾಣ ಕಾಮಗಾರಿ ಮುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

ಬೇಗನೆ ರಸ್ತೆ ನಿರ್ಮಾಣ ಮಾಡದಿದ್ದರೆ ಪುರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ರಸ್ತೆ ನಿರ್ಮಾಣ ಮಾಡಲಾಗದಿದ್ದರೆ, ರಸ್ತೆಯನ್ನು ಅಗೆದು ಹಾಕುವ ಅವಶ್ಯಕತೆ ಏನಿತ್ತು? ಈಗ ಸಾರ್ವಜನಿಕರು ಓಡಾಡಲಾಗದ ಹಾಗೂ ವಾಹನಗಳು ಹೋಗಲಾರದ ಸ್ಥಿತಿ ಬಂದಿದೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಬೇಕು ಎಂದು ಬಸವೇಶ್ವರನಗರದ ನಿವಾಸಿ ಆನಂದ ಸುರಪುರ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-19-1065127977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.