ಅಳಿವಿನ ಅಂಚಿನಲ್ಲಿ ಕೈಮಗ್ಗ ಉದ್ದಿಮೆ

7
ರಾಷ್ಟ್ರೀಯ ನೇಕಾರ ದಿನ ಇಂದು

ಅಳಿವಿನ ಅಂಚಿನಲ್ಲಿ ಕೈಮಗ್ಗ ಉದ್ದಿಮೆ

Published:
Updated:
Deccan Herald

ರಬಕವಿ ಬನಹಟ್ಟಿ: 1970 ಮತ್ತು 80 ರ ದಶಕದಲ್ಲಿ ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಂದಾಜು ಮೂರು ಸಾವಿರಕ್ಕಿಂತ ಹೆಚ್ಚು ಮಗ್ಗಗಳು ಇದ್ದವು. ಆದರೆ ಇಂದು ಇದೇ ಭಾಗದಲ್ಲಿ ಕೇವಲ ಕೈ ಬೆರಳಿಣಿಕೆಯ ಮೇಲೆ ಮಾತ್ರ ಎಣಿಸುವಷ್ಟು ಕೈಮಗ್ಗಗಳು ಉಳಿದಿವೆ. ಹತ್ತು ಹನ್ನೆರಡು ಜನ ಮಾತ್ರ ಕೈ ಮಗ್ಗ ನೇಕಾರರು ಉಳಿದಿದ್ದಾರೆ. ಇಂದು ಕೈಮಗ್ಗಗಳು ಸಂಪೂರ್ಣವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಕೈಮಗ್ಗ ನೇಕಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಕೂಡ ಬಹಳಷ್ಟು ಶೋಚನಿಯವಾಗಿದೆ.

ಬನಹಟ್ಟಿಯಲ್ಲಿ ಇಂದು ಕಾಡಪ್ಪ ಮಾಚಕನೂರ, ಅಶೋಕ ಮಾಚಕನೂರ ಮತ್ತು ಅಶೋಕ ಬಡ್ಡೂರ ಅವರ ಮನೆಯಲ್ಲಿ ಮಾತ್ರ ಕೈಮಗ್ಗಳು ಇವೆ. ಇವುಗಳನ್ನು ಬಿಟ್ಟರೆ ಬೇರೆ ಯಾರ ಮನೆಯಲ್ಲಿ ಕೈಮಗ್ಗಗಳು ಇಲ್ಲದಂತಾಗಿವೆ. ಇನ್ನೂ ಕೈಮಗ್ಗ ನೇಯ್ಗೆಯಲ್ಲಿ ತೊಡಗಿರುವವರು ಕೂಡಾ ವಯಸ್ಸಾದವರು. ಯಾವ ಯುಕವರು ಈ ಕಡೆಗೆ ಬರುತ್ತಿಲ್ಲ.

ಮಹಾದೇವಪ್ಪ ಟಿರಕಿ,(74), ಪರಪ್ಪ ಸಗರಿ(78), ಕಾಡಪ್ಪ ಅಥಣಿ(67), ಬಸಪ್ಪ ಗೊಂದಕರ್‌(67), ಮುರಗೆಪ್ಪ ಬಾಡನವರ(70), ಕಾಡಪ್ಪ ಬಿಳ್ಳೂರ(72) ಮಹಾದೇವಪ್ಪ ಮಾಚಕನೂರ(70) ಇವರು ಸದ್ಯದಲ್ಲಿರುವ ಕೈಮಗ್ಗ ನೇಕಾರರು. ಇವರೆಲ್ಲರ ವಯಸ್ಸುನ್ನು ಗಮನಿಸಿದಾಗ ಇವರು ಎಪ್ಪತ್ತು ವಯಸ್ಸಿನ ಮೇಲಿನವರೆ. ಆದರೆ ಯಾವುದೆ ಯುವಕರು ಕೈಮಗ್ಗ ನೇಯ್ಗೆಗೆ ಬರುತ್ತಿಲ್ಲ. ಇವರು ಕೈಮಗ್ಗ ನೇಕಾರಿಕೆಯ ಕೊನೆಯ ಕೊಂಡಿಯಾಗಿದ್ದಾರೆ ಎಂದರೂ ತಪ್ಪಾಗಲಾರದು.

ಇನ್ನೂ ಈ ನೇಕಾರರು ವಾರಕ್ಕೆ ಮೂರು ಸೀರೆಗಳನ್ನು ನೇಯುತ್ತಾರೆ. ಒಂದು ಸೀರೆಗೆ ರೂ. 152 ಕೂಲಿ ದೊರೆಯುತ್ತದೆ. ಅಂದರೆ ಒಂದು ದಿನಕ್ಕೆ ರೂ75 ಕೂಲಿಯನ್ನು ಪಡೆಯುತ್ತಾರೆ. ಇನ್ನೂ ಆರೋಗ್ಯ ಕೈಕೊಟ್ಟಾಗ ಇವರ ಉದ್ಯೋಗವೇ ಬಂದಾಗುತ್ತದೆ. ಜೊತೆಗೆ ಕೂಲಿಯೂ ಇಲ್ಲದ ಸ್ಥಿತಿ.

ಕೈಮಗ್ಗ ಸೀರೆಗಳಿಗೂ ಕೂಡಾ ಮೊದಲಿನಷ್ಟು ಬೇಡಿಕೆ ಇಲ್ಲದಂತಾಗಿದೆ. ಆದರೂ ಬೆಳಗಾವಿ, ಬಾಗಲಕೋಟೆಗಳಿಗೆ ಸೀರೆಗಳನ್ನು ಕಳಿಸುತ್ತೇವೆ ಎನ್ನುತ್ತಾರೆ ಕೈಮಗ್ಗಗಳ ನೇಕಾರ ಮಾಲೀಕರಾದ ಕಾಡಪ್ಪ ಮಾಚಕನೂರ. ಸೀರೆಯ ದರಗಳು ಅವುಗಳಿಗೆ ಬಳಸುವ ನೂಲಿನ ಮೇಲೆ ಅವಲಂಬಿತವಾಗಿರುತ್ತದೆ.

ಕೆಲವು ವರ್ಷಗಳ ಹಿಂದೆ ಕೆಎಚ್‌ಡಿಸಿಯಲ್ಲಿ ಅಂದಾಜು 6,000 ಸಾವಿರದಷ್ಟು ಮೈಮಗ್ಗಗಳು ಇದ್ದವು. ಈಗ ಅವು ಕೂಡಾ ಸಾವಿರ ಸಮೀಪಕ್ಕೆ ಬಂದಿವೆ. ಇನ್ನೂ ಕೆಲವೇ ವರ್ಷಗಳಲ್ಲಿ ಇವು ಕೂಡ ಮರೆಯಾಗುತ್ತವೆ ಎನ್ನುತ್ತಾರೆ ದುಂಡಪ್ಪ ಮಾಚಕನೂರ.

ಆದ್ದರಿಂದ ಕೈಮಗ್ಗ ನೇಕಾರಿಕೆಯ ಅಭಿವೃದ್ಧಿಗಾಗಿ ಮತ್ತು ಕೈಮಗ್ಗ ನೇಕಾರರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈಗಿರುವ ನೇಕಾರರಿಗೆ ಸೂಕ್ತ ಕೂಲಿಯನ್ನು ಕೊಡುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಬೇಕಾದ ಅಗತ್ಯವಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !