ರಬಕವಿ ಬನಹಟ್ಟಿ: ಈವರೆಗೆ ಕೆಎಚ್ಡಿಸಿ ನೇಕಾರರಿಗೆ ಇಲಾಖೆಯು ಪರಿವರ್ತನಾ ಶುಲ್ಕವನ್ನು ನಗದು ರೂಪದಲ್ಲಿ ನೀಡುತ್ತಿತ್ತು. ಆದರೆ ಈಗ ಬ್ಯಾಂಕ್ ಮೂಲಕ ಹಣ ಪಾವತಿಗೆ ಮುಂದಾಗಿದೆ. ಇದನ್ನು ಖಂಡಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಕೆಎಚ್ಡಿಸಿ ಕಾರ್ಯಾಲಯದಲ್ಲಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

‘ಬ್ಯಾಂಕ್ ಮೂಲಕ ಶುಲ್ಕ ಪಾವತಿಸಿದರೆ ವಾರಕ್ಕೆರಡು ಬಾರಿ ಬ್ಯಾಂಕ್ಗೆ ಅಲೆದಾಡಬೇಕಾಗುತ್ತದೆ. ಇದು ಸಾಧ್ಯವಿಲ್ಲ. ಬಹುತೇಕ ನೇಕಾರರು 80 ವರ್ಷ ಮೇಲ್ಪಟ್ಟವರು ಇದ್ದಾರೆ. ಇದರಿಂದಾಗಿ ಅವರ ದೈನದಿಂದ ಜೀವನಕ್ಕೆ ತೊಂದರೆಯಾಗಲಿದೆ. ಇನ್ನೂ ಕರ್ನಾಟಕ ನಂ.1 ಮೂಲಕ ಪಡೆದುಕೊಳ್ಳಲು ಕೂಡ ತೊಂದರೆಯಾಗಲಿದೆ. ಆದ್ದರಿಂದ ಇಲಾಖೆ ಕಾರ್ಯಾಲಯದಲ್ಲಿಯೇ ನೇಕಾರರಿಗೆ ಹಣ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಆಗ್ರಹಿಸಿದರು.

ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ 15 ದಿನಗಳ ಹಿಂದೆಯೇ ತಿಳಿಸಲಾಗಿತ್ತು. ಆದರೆ ಅವರು ಯಾವುದೇ ಕ್ರಮವಹಿಸಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕೆಎಚ್ಡಿಸಿ ಯೋಜನಾಧಿಕಾರಿ ವಿಜಯಕುಮಾರ ಬೀಳಗಿ ಮಾತನಾಡಿ, ‘ಇದು ನಿಗಮದ ಆದೇಶ. ಈಗಾಗಲೇ ಇಲಾಖೆಯು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಅಂದಾಜು 2,500ಕ್ಕಿಂತ ಹೆಚ್ಚಿನ ನೇಕಾರರಿಗೆ ಆನ್ಲೈನ್ ಮೂಲಕ ಹಣ ಪಾವತಿಸುತ್ತಿದೆ. ಇದಕ್ಕೆ ನೇಕಾರರು ಸಹಕರಿಸಬೇಕು’ ಎಂದು ತಿಳಿಸಿದರು.

ಸಿದ್ದಪ್ಪ ಗಂವಾರ, ನಾಮದೇವ ಗೋಂದಕರ್, ಎಂ.ಎ.ಜಮಾದಾರ, ಗಂಗಪ್ಪ ಹಳ್ಯಾಳ, ಶಿವಲೀಲಾ ಜಾಡಗೌಡ, ಲಕ್ಷ್ಮಿ ಬಂಗಿ, ಎಂ.ಎಸ್.ತಳವಾರ, ಎಸ್. ಕೆ. ಕಳ್ಳಿಗುದ್ದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.