ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದತೆ ಸಮಾಜದ ಬೇರಾಗಿರಲಿ: ರಮೇಶ ಅವರಾದಿ

ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪನಾ ದಿನ
Last Updated 20 ಫೆಬ್ರುವರಿ 2022, 16:32 IST
ಅಕ್ಷರ ಗಾತ್ರ

ತೇರದಾಳ: ಪ್ರತಿಯೊಂದು ಸಮಾಜದ ಜೊತೆಗೆ ಸೌಹಾರ್ದಯುತವಾಗಿ ಬೆರೆತುಕೊಂಡಿರುವ ಬಣಜಿಗರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಹಾಗೇಯೆ ಸೌಹಾರ್ದತೆ ಪ್ರತಿ ಸಮಾಜಕ್ಕೂ ಅವಶ್ಯವಾಗಿದ್ದು ಅದೇ ಬೇರಿನಂತೆ ಕೆಲಸ ಮಾಡಲಿ ಎಂದು ಪಟ್ಟಣದ ಬಣಜಿಗ ಸಮಾಜದ ಹಿರಿಯರಾದ ರಮೇಶ ಅವರಾದಿ ಹೇಳಿದರು.

ಶನಿವಾರ ಇಲ್ಲಿನ ಪೇಟೆ ಭಾಗದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ 19ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯಕೀಯ (ಔಷಧ) ಸೇವೆಯಲ್ಲಿ 50 ವರ್ಷಗಳ ಸೇವೆ ಸಲ್ಲಿಸಿದ ಕಾರಣಕ್ಕೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದ ಸ್ಥಳೀಯ ನಗರ ಘಟಕ ಅಧ್ಯಕ್ಷ ಅಶೋಕ ಮಹಾಬಳಶೆಟ್ಟಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಹಾಲಿ-ಮಾಜಿ ಶಾಸಕರು ಸೇರಿದಂತೆ ಸಮಾಜ ಬಾಂಧವರ ಜತೆಗೆ ಅನ್ಯ ಸಮಾಜ ಬಾಂಧವರು ಕೂಡ ಸಹಾಯ ಸಹಕಾರ ನೀಡಿದ್ದಾರೆ. ಸಮಾಜದ ಸಂಘಟನೆಗೆ ಯುವಕರು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಸಂತೋಷ ಪಟ್ಟಣಶೆಟ್ಟಿ, ನರಗುಂದ, ಬಾಬುರಾಜೇಂದ್ರ ಹಂಜಿ, ಬಸವರಾಜ ಪಟ್ಟಣಶೆಟ್ಟಿ, ಶಂಕರ ಮಂಗಸೂಳಿ, ಬಸವರಾಜ ಹಂಜಿ ಮಾತನಾಡಿದರು. ಸುರೇಶ ಮುಚ್ಚಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಪ್ಪ ಗಡೆನ್ನವರ ಸಮಾಜದ ನೂತನ ಸದಸ್ಯರಾಗಿ ಇದೇ ಸಂದರ್ಭದಲ್ಲಿ ಸೇರ್ಪಡೆಗೊಂಡರು.

50 ವರ್ಷ ವೈದ್ಯಕೀಯ (ಔಷಧ) ಸೇವೆ ಸಲ್ಲಿಸಿದ ಸಮಾಜದ ಬಸವರಾಜ ಹಂಜಿ ಹಾಗೂ ರಮೇಶ ಅವರಾದಿ ಅವರನ್ನು ಸಮಾಜದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾಜದ ಗೌರವ ಅಧ್ಯಕ್ಷ ಬಸವರಾಜ ಅವರಾದಿ, ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಬಾಬುರಾಜೇಂದ್ರ ಹಂಜಿ, ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಾಲಚಂದ್ರ ಯಾದವಾಡ ಪಾಲ್ಗೊಂಡಿದ್ದರು.
ಈರಪ್ಪ ಪಟ್ಟಣಶೆಟ್ಟಿ ಸ್ವಾಗತಿಸಿದರು. ಶ್ರೀನಾಥ ಸೊಟ್ಟಿ ನಿರೂಪಿಸಿದರು. ಶ್ರೀಕಾಂತ ಗದಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT