ಬುಧವಾರ, ಜೂನ್ 29, 2022
24 °C

ಕೆರೂರ: ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆರೂರ: ಪಟ್ಟಣದಲ್ಲಿ ಗುರುವಾರ ಸಂಜೆ ಭಾರಿ ಬಿರುಗಾಳಿ, ಆಲಿಕಲ್ಲು ಮಳೆಯೊಂದಿಗೆ ಧಾರಾಕಾರವಾಗಿ ಮಳೆ ಸುರಿದೆ. ಗಾಳಿ ಸಹಿತ ಮಳೆ ಸುರಿದ ಪರಿಣಾಮ ಕೆಲವಡೆಡೆ ಮರಗಳು ಧರೆಗೆ ಉರುಳಿವೆ. ವಿದ್ಯುತ ತಂತಿ‌ ಮರದ ಕೊಂಬೆಗಳು ಬಿದ್ದ ಕಾರಣ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿತ್ತು. ಇಡೀ ಪಟ್ಟಣ ಕತ್ತಲೆಯಲ್ಲಿ ಮುಳುಗಿತ್ತು.

ಸಂಜೆ 4.30 ರ ಸುಮಾರಿಗೆ ಭಾರೀ ಗುಡುಗು, ಸಿಡಿಲ ಆರ್ಭಟದೊಂದಿಗೆ ಬೀಸಿದ ಬಿರುಗಾಳಿಗೆ ಸ್ಥಳಿಯ ಎಪಿಎಂಸಿ ಆವ ರಣದಲ್ಲಿನ ಅನೇಕ ಅಂಗಡಿಗಳ ಚಾವಣಿ ಪತ್ರಾಸಗಳು ಹಾರಿ ಹೋಗಿವೆ. ಹತ್ತಾರು ಒತ್ತು ಗಾಡಿ, ಕೆಲವು ಚಹಾ ದ ಹೋಟೆಲಗಳು ಕುಸಿದಿವೆ. ಬಹುತೇಕ ರಸ್ತೆಗಳು ಜಲಾವೃತ ಗೊಂಡವು. ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ ಕಾರಣ ನಿವಾಸಿಗಳು ತೊಂದರೆ ಅನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು