ಸಂತ್ರಸ್ತರ ನೆರವಿಗೆ ಕೈ ಜೋಡಿಸಿದರು

7
ಮನೆ ಮನೆಗೆ ತೆರಳಿ ದವಸ, ಧಾನ್ಯ ಸಂಗ್ರಹಿಸಿದರು

ಸಂತ್ರಸ್ತರ ನೆರವಿಗೆ ಕೈ ಜೋಡಿಸಿದರು

Published:
Updated:
Deccan Herald

ಬಾಗಲಕೋಟೆ: ಮಹಾಮಳೆಗೆ ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರಾಗಿರುವವರ ನೆರವಿಗೆ ಬಾಗಲಕೋಟೆಯ ಯುವಕರು ಕೈ ಜೋಡಿಸಿದ್ದಾರೆ.

ಇಲ್ಲಿನ ವಿದ್ಯಾಗಿರಿಯ ನವೀನ್ ಅಂಡರಗಲ್, ಕಾಶಿನಾಥ ತಾಳಿಕೋಟಿ, ಪಂಚು, ವಿಷ್ಣು ಸೇರಿ ಸಂತ್ರಸ್ತರ ನೆರವಿಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಭಾನುವಾರ ಆರಂಭಿಸಿದ್ದಾರೆ.

ನವನಗರದ 63ಎ ಸೆಕ್ಟರ್, ವಿದ್ಯಾಗಿರಿಯಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿಕರ ನೆರವು ಕೋರಿದ್ದು, ಈ ವೇಳೆ ಅಕ್ಕಿ, ಗೋಧಿ, ಸಕ್ಕರೆ, ರವೆ, ಬಿಸ್ಕತ್ತು, ಬಟ್ಟೆ, ಬೆಡ್‌ಶೀಟ್, ಚೆಕ್ ಮೂಲಕ ಹಣ ಹೀಗೆ ದಾನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ವಿದ್ಯಾಗಿರಿಯ ಯೂನಿಯನ್ ಬ್ಯಾಂಕ್ ಬಳಿ ಕೊಡಗು ಜಿಲ್ಲೆಯ ನಿರಾಶ್ರಿತರ ಸಹಾಯ ಕೇಂದ್ರ ತೆರೆದಿದ್ದು, ಸಹಾಯ ಮಾಡಲಿಚ್ಚಿಸುವವರು ಅಲ್ಲಿಗೂ ಬಂದು ಧನ, ದವಸ–ಧಾನ್ಯ ನೀಡುತ್ತಿದ್ದಾರೆ.

ಸಾರ್ವಜನಿಕರಿಂದ ಸಂಗ್ರಹವಾದ ವಸ್ತುಗಳನ್ನು ಮಂಗಳವಾರ ನಾವೇ ಗೆಳೆಯರು ಖುದ್ದಾಗಿ ಕೊಡಗು ಜಿಲ್ಲೆಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಹಸ್ತಾಂತರ ಮಾಡಲಿದ್ದೇವೆ ಎಂದು ನವೀನ್ ‘ಪ್ರಜಾವಾಣಿ’ಗೆ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !