ರಬಕವಿ ಬನಹಟ್ಟಿ: ಮಂಗಳವಾರದಿಂದ ಹಿಡಕಲ್ ಜಲಾಶಯದಿಂದ 2450 ಕ್ಯುಸೆಕ್ ನೀರನ್ನು ಜಿಎಲ್ಬಿಸಿ ಕಾಲುವೆಗೆ ಹರಿ ಬಿಡಲಾಗುತ್ತಿದ್ದು, ಈ ನೀರು ರಬಕವಿ ಬನಹಟ್ಟಿ ತಾಲ್ಲೂಕಿಗೆ ಬುಧವಾರ ಬಂದು ತಲುಪಿದೆ. ಈ ಭಾಗಕ್ಕೆ 1400 ಕ್ಯುಸೆಕ್ ನೀರು ಬರುತ್ತಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ತಿಳಿಸಿದರು.

ಅವರು ಗುರುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬನಹಟ್ಟಿ ತೇರದಾಳ, ಮಧುರಖಂಡಿ, ಮರೆಗುದ್ದಿ ಮತ್ತು ಮುಧೋಳ ಸೇರಿದಂತೆ ಇತರ ಕೆರೆಗಳನ್ನು ಕಾಲುವೆಗೆ ನೀರು ತುಂಬಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಮುಂದಿನ ಏಳು ದಿನಗಳಲ್ಲಿ ಈ ಕಾರ್ಯ ನಡೆಯಲಿದೆ. ನೀರನ್ನು ಜನ ಮತ್ತು ಜಾನುವಾರು ಕುಡಿಯುವ ನೀರಿಗಾಗಿ ಮಾತ್ರ ಬಳಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ತಹಶೀಲ್ದಾರರು, ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಬೆಳಿಗ್ಗೆಯಿಂದಲೇ ವೀಕ್ಷಣೆಯಲ್ಲಿ ತೊಡಗಿದ್ದೇವೆ. ನೀರನ್ನು ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದ ತಿಳಿಸಿದರು.

ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಶಿರಸ್ತೆದಾರ ರಾಜಶೇಖರ ಸಾತಿಹಾಳ, ಜಿ ಎಲ್ ಬಿ ಸಿ ಎಇಇ ಶ್ರೀಧನ ನಂದಿಹಾಳ, ಹಿಪ್ಪರಗಿ ಬ್ಯಾರೇಜ್ ಸಹಾಯಕ ಎಂಜಿನಿಯರ್ ವಿ.ಎನ್.ನಾಯಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-19-996268812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.