ಮಹಾಲಿಂಗಪುರ: ಹಿಂದಿ ಭಾಷೆ ಭಾರತೀಯರನ್ನು ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸುತ್ತದೆ. ಹಿಂದಿ ಭಾರತದ ಅಸ್ಮಿತೆ ಮತ್ತು ಹೆಮ್ಮೆ ಎರಡೂ ಆಗಿದೆ ಎಂದು ಸಮೀರವಾಡಿಯ ಗೋದಾವರಿ ರಿಫೈನರೀಸ್ ಡಿಜಿಎಂ ಅಮೀತ್ ತ್ರಿಪಾಟಿ ಹೇಳಿದರು.
ಸಮೀಪದ ಸಮೀರವಾಡಿಯ ಕೆ.ಜೆ.ಸೊಮೈಯಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಹಿಂದಿ ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಹಿಂದಿ ದಿವಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿ ಭಾಷೆಯನ್ನು ಬಳಸಿ ವಿಶ್ವದ ಎಲ್ಲಾ ದೇಶಗಳಲ್ಲಿ ವಾಸಿಸುವ ಭಾರತೀಯರನ್ನು ಒಂದುಗೂಡಿಸಲು ಪ್ರತಿವರ್ಷ ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ ಎಂದರು.
8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳು ನೃತ್ಯ ಹಾಗೂ ಹಾಡು ಪ್ರಸ್ತುತಪಡಿಸಿದರು. ‘ಹಿಂದಿ ದಿವಸ್’ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆ ಪ್ರಾಚಾರ್ಯ ಸಿ.ಅನೀಲಕುಮಾರ, ಕೋ-ಆರ್ಡಿನೇಟರ್ ವಿಕ್ರಮ ದೊಡ್ಡಗೌಡರ, ಸಿಸಿಎ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥೆ ಸುಲಭಾ ಸಿ.ಸೊನ್ನದ, ಅಮಿತಾಂಜಲಿ ಚತುರ್ವೇದಿ, ಜಯಮಾಲಾ ತಾಂಬೆ, ಸವಿತಾ ಪುಲಾಟೆ ಇದ್ದರು.
ಮಹಾಲಿಂಗಪುರ ಸಮೀಪದ ಸಮೀರವಾಡಿಯ ಕೆ.ಜೆ.ಸೊಮೈಯಾ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ೯ನೇ ತರಗತಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.