ಹುನಗುಂದ: ಆಜಾದ್ ನಗರದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನವಾಗಿದ್ದು, ₹2.30 ಲಕ್ಷ ಮೌಲ್ಯದ ಬಂಗಾರ ಮತ್ತು ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಅಜಾದ್ ನಗರದಲ್ಲಿ ತಡರಾತ್ರಿ ಕಾನ್ಸ್ಟೆಬಲ್ ಮನೆಯೂ ಸೇರಿದಂತೆ ಒಟ್ಟು ನಾಲ್ಕು ಮನೆಗಳ ಬೀಗ ಮುರಿದಿದ್ದು, ಅವುಗಳಲ್ಲಿ ಎರಡು ಮನೆಗಳಲ್ಲಿ ಬಂಗಾರ ಮತ್ತು ನಗದು ಕಳ್ಳತನವಾಗಿದೆ. ನಗರದ ಅಜಮೀರ್ ಮನಿಯಾರ್ ಅವರ ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದು ಬಿರುವಿನಲ್ಲಿಟ್ಟಿದ್ದ 8 ಗ್ರಾಂ ಬಂಗಾರ, 290 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹20,000 ನಗದು ಕಳ್ಳತನ ಮಾಡಲಾಗಿದೆ.

ನಗರದ ಮಾನ್ವವರ್ ಪಾಷಾ ಇನಾಮಾದರ ಎಂಬುವರ ಮನೆಯ ಬಾಗಿಲಿನ ಕೀಲಿಕೊಂಡಿ ಮುರಿದ ಕಳ್ಳರು ಬಿರುವಿನಲ್ಲಿಟ್ಟಿದ್ದ 5 ಗ್ರಾಂ ಬಂಗಾರದ ಕಿವಿಯ ರಿಂಗ್ ಹಾಗೂ ₹1.20 ಲಕ್ಷ ನಗದು ದೋಚಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳ್ಳತನಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಶನಿವಾರ ತಡ ರಾತ್ರಿ ಮೂವರು ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ನಾಲ್ಕು ಪ್ರಕರಣ: ಆಜಾದ್ ನಗರದಲ್ಲಿ ಕಳ್ಳತನ ಆಗುವುದು ಇದೇ ಮೊದಲಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ನಾಲ್ಕು ಪ್ರಕರಣಗಳು ನಡೆದಿವೆ. ಅದರಲ್ಲಿಎರಡು ಬಾರಿ ಪೊಲೀಸರ ಮನೆಗಳಲ್ಲಿ ಕಳ್ಳತನ ಆಗಿದೆ. ನಿರಂತರ ಕಳ್ಳತನ ನಡೆಯುತ್ತಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-19-598170510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.