ಹುನಗುಂದ: ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ತೊಗರಿ, ಕಡಲೆ, ಸೇರಿದಂತೆ ಇತರೆ ಧಾನ್ಯಗಳ ಮಾರಾಟದ ಸಂದರ್ಭದಲ್ಲಿ ಹೆಚ್ಚುವರಿ ತೂಕ ಸೇರಿದಂತೆ ಇತರೆ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘದ ವತಿಯಿಂದ ಎಪಿಎಂಸಿ ಕಾರ್ಯದರ್ಶಿ ಆರ್.ಎಂ.ದಂಡಿನ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡ ಮಹಾಂತೇಶ ಐಹೊಳೆ ಮಾತನಾಡಿ, ಬೆಂಬಲ ಖರೀದಿ ಕೇಂದ್ರದಲ್ಲಿ ರೈತರನ್ನು ನಿರಂತರ ವಂಚಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರದಲ್ಲಿ ಮಾರಾಟ ಮಾಡುವ ತೊಗರಿ, ಕಡಲೆ ಸೇರಿದಂತೆ ಇತರೆ ಧಾನ್ಯಗಳನ್ನು ತೂಕದ ಸಂದರ್ಭದಲ್ಲಿ 50 ಕೆ.ಜಿ. ಒಂದು ಪ್ಯಾಕೆಟ್ ಗೆ ಹೆಚ್ಚುವರಿಯಾಗಿ ಒಂದು ಕೆ.ಜಿ ಪಡೆಯುತ್ತಿದ್ದಾರೆ. ಅದೇ ರೀತಿ ಕಾಳುಗಳ ಸ್ಯಾಂಪಲ್ ಹೆಸರಿನಲ್ಲಿ ಐದು ಕೆಜಿಗಿಂತಲೂ ಹೆಚ್ಚು ಪಡೆದು ರೈತರನ್ನು ವಂಚಿಸುತ್ತಿದ್ದಾರೆ. ಮತ್ತೆ ತೂಕದ ಕೊನೆಯಲ್ಲಿ ರೈತನಿಂದ ಹಮಾಲರು 40 ರಿಂದ 50 ಕೆಜಿ ಪಡೆಯುತ್ತಿದ್ದಾರೆ. ಈ ರೀತಿ ಹಂತ ಹಂತವಾಗಿ ಖರೀದಿ ಕೇಂದ್ರದ ಸಿಬ್ಬಂದಿಗಳು ಹಾಗೂ ಹಮಾಲರು ನಿಯಮ ಬಾಹಿರವಾಗಿ ರೈತರನ್ನು ವಂಚಿಸುವ ಕಾರ್ಯ ನಡೆಯುತ್ತಿದೆ. ಈ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ರಸೂಲಸಾಬ್ ತಹಶೀಲ್ದಾರ್, ಎಸ್. ಬಿ. ಫೈಲ್ ವೀರನಗೌಡ ಪಾಟೀಲ, ಬಸನಗೌಡ ಫೈಲ್, ರಮೇಶ ಕಡಪಟ್ಟಿ, ಬಸವರಾಜ ಮುರನಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-19-1974366483

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.