ಹುನಗುಂದ: ತಾಲ್ಲೂಕಿನ ಹತ್ತು ಗ್ರಾಮಗಳ ಸಂತ್ರಸ್ತರು ಸೇರಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೂನ್ 1 ರಂದು ಇದ್ದಲಗಿಯಿಂದ ಕೂಡಲಸಂಗಮವರಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕಿನ ಇದ್ದಲಗಿ ಗ್ರಾಮದಲ್ಲಿ 22 ದಿನಗಳಿಂದ ಧರಣಿ ನಿರತ ಸಂತ್ರಸ್ತರು ನಿರ್ಧರಿಸಿದ್ದಾರೆ.

ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಧರಣಿ ನಿರತ ಸಂತ್ರಸ್ತರು ಸಭೆ ಸೇರಿ ಈ ತೀರ್ಮಾನ ಕೈಗೊಂಡಿದ್ದು, ಸಭೆಯಲ್ಲಿ ಅಂದಾಜು 400ಕ್ಕೂ ಹೆಚ್ಚು ಸಂತ್ರಸ್ತರು ಪಾಲ್ಗೊಂಡಿದ್ದರು.

ನಾರಾಯಣಪುರ ಜಲಾಶಯದ ಹಿನ್ನೀರು ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಬಾಧಿತ ಸಂತ್ರಸ್ತರಿಗೆ ಪ್ರಮುಖವಾಗಿ ಎರಡನೇ ಹಂತದ ಹಣ ಬಿಡುಗಡೆ ಮಾಡುವುದು, ನಿವೇಶನಕ್ಕೆ ಒಂದು ಗುಂಟೆ ಬದಲಿ ನಾಲ್ಕು ಗುಂಟೆ ಜಮೀನು ನೀಡಬೇಕು ಎಂಬುದು ಆಗ್ರಹವಾಗಿದೆ.

ಗ್ರಾಮದಲ್ಲಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದರು.

ಪ್ರಮುಖವಾಗಿ ಶಿಥಿಲಾವಸ್ಥೆಯಲ್ಲಿರುವ ತಗಡಿನ ಶೆಡ್ಗಳಿಗೆ ಪರ್ಯಾಯವಾಗಿ ಹೊಸ ಶೆಡ್ ನಿರ್ಮಿಸುವುದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅನುದಾನವಿಲ್ಲ ಎಂಬ ನೆಪ ಹೇಳುತ್ತಿರುವುದಕ್ಕೆ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಿರುವ ಶೆಡ್ಗಳು ಹಾಳಾಗಿರುವುದರಿಂದ ಹೊಸ ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದು ಹೋರಾಟವನ್ನು ತೀವ್ರಗೊಳಿಸಲು ಸಂತ್ರಸ್ತರು ತೀರ್ಮಾನಿಸಿದ್ದಾರೆ.

ಮುಖಂಡರಾದ ಬಸವರಾಜ ಬಡ್ಡಿ, ಕಲ್ಲಪ್ಪ ಆನೇಹೊಸೂರ, ಭೀಮಪ್ಪ ಅಡಿಹಾಳ, ಮಹಾಂತೇಶ ನಾಡಗೌಡರ, ಭೀಮಪ್ಪ ಗೋನಾಳ, ಶರಣಪ್ಪ ಮುಳ್ಳೂರ, ಹಸನ್ ಸಾಹೇಬ್ ಪಿಂಜಾರ್, ಸರೋಜಮ್ಮ ಹಿರೇಮಠ, ಮೀನಾಕ್ಷಮ್ಮ ಗಂಜಿಹಾಳ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-19-1243221473

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.