ಹುನಗುಂದ: ಸುಡುವ ಬಿಸಿಲಿಗೆ ಕಾದ ಕುಲುಮೆಯಂತೆ ಆಗಿರುವ ತಗಡಿನ ಶೆಡ್ಗಳಲ್ಲಿ ವಾಸಿಸುತ್ತಿರುವವರ ಗೋಳು ಕೇಳುವವರು ಇಲ್ಲದಂತಾಗಿದೆ. ಇಲ್ಲಿ ವಾಸಿಸುವ ಸಂತ್ರಸ್ತರ ಬದುಕು ಮಾತ್ರ ತೀರಾ ಶೋಚನಿಯ.

ಹೌದು. ಈ ರೀತಿಯ ದೃಶ್ಯಗಳು ಕಂಡುಬಂದಿದ್ದು, ನಾರಾಯಣಪುರ ಜಲಾಶಯದ ಹಿನ್ನೀರು ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಬಾಧಿತ ತಾಲ್ಲೂಕಿನ ಇದ್ದಲಗಿ ಗ್ರಾಮದಲ್ಲಿ. ಈ ಸಮಸ್ಯೆಗಳು ಇಂದು ನಿನ್ನೆಯದಲ್ಲ. ಕಳೆದ 18 ವರ್ಷಗಳಿಂದ ಸಂತ್ರಸ್ತರು ಅಭದ್ರತೆ ಮತ್ತು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಂತ್ರಸ್ತರು ವಾಸಿಸುವ ಶೆಡ್ಗಳು ಮಳೆ ಹಾಗೂ ಬಿಸಿಲಿನ ತಾಪದಿಂದ ಶಿಥಿಲಾವಸ್ಥೆಯಿಂದ ಕೂಡಿದ್ದು, ಬೀಳುವ ಹಂತದಲ್ಲಿವೆ. ಅಲ್ಲಿಯೇ ಬದುಕು ಸಾಗಿಸಬೇಕಾಗಿದೆ.

ಗ್ರಾಮದಲ್ಲಿ 200ಕ್ಕೂ ಹೆಚ್ಚು ಶೆಡ್ಗಳಿದ್ದು, ಅವುಗಳಲ್ಲಿ 50 ಶೆಡ್ಗಳಲ್ಲಿ ಸಂತ್ರಸ್ತರಿದ್ದು, ಇನ್ನುಳಿದವರು ತಮ್ಮ ಹಳೆಯ ಮನೆಗಳಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿ ಹಳೆಯ ಮನೆಗಳತ್ತ ನೀರು ನುಗ್ಗಿದರೆ ಮನೆ ಖಾಲಿ ಮಾಡಿ ಶೆಡ್ಗಳತ್ತ ಮುಖ ಮಾಡಬೇಕಾಗುತ್ತದೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ಹೇಳಿದರು.

ಗ್ರಾಮದ ಹೊರ ವಲಯದಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಮೂರ್ನಾಲ್ಕು ಕುಟುಂಬಗಳು ಮಾತ್ರ ನೆಲೆಸಿವೆ. ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ 254 ಎಕರೆ ಭೂಸ್ವಾಧೀನ ಮಾಡಿಕೊಂಡಿದ್ದು, 1030 ಕುಟುಂಬಗಳು ನಿವೇಶನ ಪಡೆಯಲು ಅರ್ಹರಾಗಿದ್ದಾರೆ. ಆದರೆ, ನಿಯಮಾವಳಿಗಳ ಪ್ರಕಾರ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಒಂದು ಗುಂಟೆ ವಿಸ್ತೀರ್ಣ ಒಳಗೊಂಡ ನಿವೇಶನ ಮಾತ್ರ ನೀಡಲಾಗುತ್ತಿದೆ. ಭೂಸ್ವಾಧೀನದಿಂದ ಒಟ್ಟು 5084 ನಿವೇಶನಗಳು ಲಭ್ಯವಿದ್ದು, ಒಂದು ಗುಂಟೆ ನಿವೇಶನದ ಬದಲು 4 ಗುಂಟೆ ನಿವೇಶನ ಕೊಡಿ ಎಂಬುದು ಸಂತ್ರಸ್ತರ ಪ್ರಮುಖ ಬೇಡಿಕೆ.

ಒಂದು ಗುಂಟೆ ನಿವೇಶನದಿಂದ ಅವಿಭಕ್ತ ಕುಟುಂಬಗಳು ಚೊಕ್ಕ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ದವಸ-ಧಾನ್ಯ, ಕೃಷಿ ಸಲಕರಣೆ, ಯಂತ್ರೋಪಕರಣ, ಹೊಟ್ಟು-ಮೇವು, ಸೌದೆ ಇತ್ಯಾದಿ ಸಾಮಗ್ರಿ ಸಂಗ್ರಹಣೆಗೆ, ಜಾನುವಾರು ಸಾಕಾಣಿಕೆಗೆ ಕೊಟ್ಟಿಗೆ ನಿರ್ಮಾಣ ಎಲ್ಲಕ್ಕಿಂತ ಮುಖ್ಯವಾಗಿ ಶೌಚಾಲಯ ನಿರ್ಮಾಣಕ್ಕೆ ಈ ಒಂದು ಗುಂಟೆ ನಿವೇಶನಗಳು ಸಾಲದಾಗುತ್ತವೆ ಎಂಬುದು ಸಂತ್ರಸ್ತರ ಅಳಲು.

ಪುನರ್ವಸತಿ ಕೇಂದ್ರ ಅವ್ಯವಸ್ಥೆ: ಗ್ರಾಮದಲ್ಲಿರುವ ಪುನರ್ವಸತಿ ಪ್ರದೇಶ ಅವ್ಯವಸ್ಥೆ ಆಗರವಾಗಿದ್ದು, ಖಾಲಿ ನಿವೇಶನಗಳಲ್ಲಿ ಸುತ್ತಲು ಮುಳ್ಳು ಕಂಟಿಗಳು ಬೆಳೆದು ಪೊದೆಗಳಾಗಿವೆ.

ವಿಷ ಜಂತುಗಳಿಗೆ ಆಶ್ರಯ ತಾಣವಾಗಿದೆ. ಸರಿಯಾದ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿಲ್ಲ. ಹೀಗಾಗಿ ಅಲ್ಲಿ ವಾಸಿಸಲು ತೊಂದರೆ ಆಗುತ್ತಿದೆ ಎಂಬುದು ಸಂತ್ರಸ್ತರ ಮಾತು.

18 ವರ್ಷಗಳಿಂದ ಸಂತ್ರಸ್ತರಾದ ನಾವು ಅಭದ್ರತೆ ಮತ್ತು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಶೆಡ್ಗಳ ತಾತ್ಕಾಲಿಕ ರಿಪೇರಿ ಮಾಡಬೇಕು. ಪುನರ್ವಸತಿ ಕೇಂದ್ರಗಳಲ್ಲಿ ಸೌಕರ್ಯ ಕಲ್ಪಿಸಿ
ಭೀಮಣ್ಣ ಅಡಿಹಾಳ, ಕಲ್ಲಪ್ಪ ಆನೆಹೊಸೂರ ಸಂತ್ರಸ್ತರು, ಇದ್ದಲಗಿ ಗ್ರಾಮ

ಶೆಡ್ ಬಳಿಯೇ ಅನಿರ್ದಿಷ್ಟಾವಧಿ ಧರಣಿ ಇಂದಿನಿಂದ

ತಾಲ್ಲೂಕಿನ ಬಿಸಾನಾಳಕೊಪ್ಪ, ಇದ್ದಲಗಿ, ಕಮದತ್ತ ಅಡಿಹಾಳ ಅನಪಕಟ್ಟಿ, ಕೆಸರಪೆಂಟಿ, ವರಗೋಡದಿನ್ನಿ, ಕೆಂಗಲ ಕಡಪಟ್ಟಿ, ಖಜಗಲ್ ಹಾಗೂ ಎಮ್ಮಟ್ಟಿ ಗ್ರಾಮಗಳು ನಾರಾಯಣಪುರ ಜಲಾಶಯದ ಹಿನ್ನೀರು ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಬಾಧಿತ ಗ್ರಾಮಗಳಾಗಿವೆ.

10 ಗ್ರಾಮಗಳ 11 ಪುನರ್ವಸತಿ ಕೇಂದ್ರಗಳಲ್ಲಿ 3460 ಸಂತ್ರಸ್ತ ಕುಟುಂಬಗಳ ಪುನರ್ವಸತಿಗೆಂದು 11,500 ವಸತಿ ನಿವೇಶನಗಳನ್ನು 750 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಕೆಲವರಿಗೆ ಹಕ್ಕು ಪತ್ರ ಕೊಡಲಾಗುತ್ತದೆ. ನೀಡಲಾಗಿದ್ದು ಇನ್ನೂ ಹಲವರಿಗೆ ಹಕ್ಕುಪತ್ರ ನೀಡುವುದು ಬಾಕಿ ಇದೆ. ಎಲ್ಲ ಅರ್ಹ ಸಂತ್ರಸ್ತ ಕುಟುಂಬಗಳಿಗೆ ತಲಾ ಒಂದೊಂದು ನಿವೇಶನ ಹಂಚಿಕೆ ಮಾಡಿದ ನಂತರವೂ 11 ಪುನರ್ವಸತಿ ಕೇಂದ್ರಗಳಲ್ಲಿ 12,000ಕ್ಕೂ ಹೆಚ್ಚು ನಿವೇಶನಗಳು ಖಾಲಿಯಾಗಿ ಉಳಿಯಲಿವೆ. ಹೀಗಾಗಿ ಸಂತ್ರಸ್ತರು ಒಂದು ಗುಂಟೆ ನಿವೇಶನದ ಬದಲು ನಾಲ್ಕು ನಿವೇಶನಗಳನ್ನು ಕೊಡಬೇಕು ಎನ್ನುವುದು ಒತ್ತಾಯ.

ಇದ್ದಲಗಿ ಗ್ರಾಮದ ಸಂತ್ರಸ್ತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬುಧವಾರದಿಂದ ಗ್ರಾಮದಲ್ಲಿರುವ ಶೆಡ್ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ.

ಸಂತ್ರಸ್ತರ ಸಮಸ್ಯೆಗಳು ಹಾಗೂ ಅನಿರ್ದಿಷ್ಟಾವಧಿ ಧರಣಿ ಬಗ್ಗೆ ಮಾಹಿತಿ ಪಡೆಯಲು ತಹಶೀಲ್ದಾರ್ ಅವರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.