ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ಮೂಲಸೌಲಭ್ಯ ಕಲ್ಪಿಸು ವುದು ಸೇರಿದಂತೆ ವಿವಿಧ ಬೇಡಿ ಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ 16ನೇಯ ದಿನವೂ ಮುಂದುವರಿಯಿತು.

ಕಳೆದ ಹತ್ತಾರು ವರ್ಷಗಳಿಂದ ಸಂತ್ರಸ್ತರು ವಾಸವಿರುವ ಶೆಡ್ಗಳು ಮಳೆ ಗಾಲ ಮತ್ತು ಪ್ರಮುಖ ಬೇಡಿಕೆ ಶಿಥಿಲಾವ್ಯಸ್ಥೆಯಿಂದ ಕೂಡಿವೆ. ಹೀಗಾಗಿ ಮಳೆಗಾಲ ಮತ್ತು ಬೇಸಿಗೆ ಸಮಯದಲ್ಲಿ ಇಲ್ಲಿ ವಾಸಿಸುವವರ ಸ್ಥಿತಿ ದಯನೀಯವಾಗಿದೆ.

ಮುಖ್ಯವಾಗಿ ಇಂತಹ ಸಂಕಷ್ಟದ ಸಮಯದಲ್ಲಿ ನಮಗೆ ವಾಸಿಸಲು ಹೊಸ ಶೆಡ್ ಗಳನ್ನು ನಿರ್ಮಾಣ ಮಾಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಸಂತ್ರಸ್ತರು ಧರಣಿ ಕುಳಿತ್ತಿದ್ದಾರೆ. ಇನ್ನಿತರ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬುಧವಾರ ರಾತ್ರಿ 10 ಗಂಟೆ ವರೆಗೂ ಸಂತ್ರಸ್ತರು ಧರಣಿ ನಡೆಸಿದರು. ಪಾರತವ್ವ ಮಠ, ನಿಂಗಮ್ಮ ಆನೆಹೊಸೂರ, ಮಾಲಂಬಿ ನಿಡಗುಂದಿ, ಮಲ್ಲಪ್ಪ ಹಾವರಾಗಿ, ಮಹಾಂತೇಶ ಆನೆಹೊಸೂರ, ಮಲ್ಲಪ್ಪ ತೋಟಗೇರ ಇಮಾಮಸಾಬ್ ಹುನಗುಂದ, ಶಿವಸಂಗಪ್ಪ ಹುನಗುಂದ, ಶಾವಂತ್ರವ್ವ ಘಂಟಿ, ಸುಜಾತ ಹಡಪದ ಮಹಾದೇವಿ ಹಾವರಾಗಿ ಪಾರವ್ವ ಆನೆಹೊಸೂರ ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-19-1441361426

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.