ಹುನಗುಂದ: ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹನ್ನೊಂದನೇ ದಿನವಾದ ಶನಿವಾರವು ಮುಂದುವರಿದಿದ್ದು, ಧರಣಿ ನಿರತರ ಸ್ಥಳಕ್ಕೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೊಡ್ಡನಗೌಡ ಅವರು, ‘ನಿಮ್ಮ ನ್ಯಾಯಯುತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಪ್ರವಾಹ ಉಂಟಾದಾಗ ನನ್ನ ಅವಧಿಯಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು. ಅದರೊಂದಿಗೆ ಎರಡು ಬಾರಿ ಶೆಡ್ಗಳನ್ನು ದುರಸ್ತಿ ಮಾಡಲಾಗಿತ್ತು . ಈಗ ಶೆಡ್ಗಳು ಶಿಥಿಲಾವ್ಯಸ್ಥೆಯಲ್ಲಿದ್ದು, ಅವುಗಳಲ್ಲಿ ವಾಸಿಸುವ ಸಂತ್ರಸ್ತರ ಬದುಕು ಶೋಚನೀಯವಾಗಿದೆ’ ಎಂದರು.

‘ತುರ್ತಾಗಿ ಹೊಸ ಶೆಡ್ಗಳನ್ನು ನಿರ್ಮಿಸಬೇಕು. ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಖಾಸಗಿ ಜಮೀನಿನ ಮಾಲೀಕರಿಗೆ ಸರ್ಕಾರದ ನಿರ್ಣಯದಂತೆ ಬಾಡಿಗೆ ಕೊಡುವುದು ಸಂಬಂಧಪಟ್ಟ ಇಲಾಖೆ ಜವಾಬ್ದಾರಿ. ಈ ಸಂಬಂಧ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಮಾತನಾಡುವೆ. ನಿಮ್ಮ ಬೇಡಿಕೆಗಳನ್ನು ಒಳಗೊಂಡ ಪತ್ರದೊಂದಿಗೆ ನನ್ನ ಮನವಿ ಪತ್ರವನ್ನು ಸೇರಿಸಿ ಕೆಬಿಜೆಎನ್ಎಲ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುವೆ’ ಎಂದು ಭರವಸೆ ನೀಡಿದರು.

ಮುಖಂಡ ಹಸನ್ ಪಿಂಜಾರ ಮಾತನಾಡಿ, ‘ಕಳೆದ 18 ವರ್ಷಗಳಿಂದ ಗ್ರಾಮಸ್ಥರು ಹಿನ್ನೀರು ಹಾಗೂ ಮಲಪ್ರಭಾ ಪ್ರವಾಹದಿಂದ ಬಾಧಿತ ಸಂತ್ರಸ್ತರು ನಿರ್ವಸತಿಕರಾಗಿದ್ದಾರೆ. ಅಭದ್ರ ಹಾಗೂ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುವಂತಾಗಿದೆ. ರಾಜ್ಯದಲ್ಲಿಯೇ ದೀರ್ಘಕಾಲದ ವರೆಗೆ ನಮ್ಮದಲ್ಲದ ತಪ್ಪಿಗೆ ಘೋರ ಶಿಕ್ಷೆ ಅನುಭವಸುವಂತಾಗಿದೆ’ ಎಂದು ಹೇಳಿದರು.

‘ಪ್ರಮುಖವಾಗಿ ಒಂದು ಗುಂಟೆ ನಿವೇಶನಕ್ಕೆ ಬದಲಾಗಿ ನಾಲ್ಕು ಗುಂಟೆ ನೀಡುವುದು, ಇನ್ನುಳಿದ ಕೆಲವರಿಗೆ ಹಕ್ಕು ಪತ್ರ ಕೊಡುವುದು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರು ಕಲ್ಪಿಸುವುದು ಸೇರಿದಂತೆ ಮೂಲಸೌಕರ್ಯ ಸಂಬಂಧಿಸಿದಂತೆ ಇತರೆ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಂತ್ರಸ್ತರ ಸಹಿಯೊಂದಿಗೆ ಉಪ ಮುಖ್ಯ ಮಂತ್ರಿ ಅವರಿಗೆ ಮನವಿ ಸಲ್ಲಿಸಿದರೂ ನಮಗೆ ನ್ಯಾಯ ದೊರಕಿಲ್ಲ’ ಎಂದು ಬೇಸರ ವ್ಯಕ್ತ ಪಡಿಸಿದರು.

ಮುಖಂಡರಾದ ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡ,ಕಲ್ಲಪ್ಪ ಆನೇಹೊಸೂರ,ಭೀಮಪ್ಪ ಅಡಿಹಾಳ, ಶರಣಪ್ಪ ಮುಳ್ಳೂರ, ಬಸವರಾಜ ಮುಳ್ಳೂರ, ಹಬೀಸಾಬ ಮುಲ್ಲಾ, ಕಲ್ಲಪ್ಪ ಬೇನಾಳ, ಹನಮಂತ ಕುರಿ, ಸಂಗಮೇಶ ಹಡಪದ, ಸರೋಜಮ್ಮ ಹಿರೇಮಠ, ನೀಲವ್ವ ಮಾಗಿ, ಮಲ್ಲಮ್ಮ ಗಡ್ಡಿಮಠ, ರೇಣುಕಾ ವಾಲಿಕಾರ, ಹೇಮವ್ವ ವಾಲಿಕಾರ, ಮಹಾದೇವಿ ತೋಟಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-307847765

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.