ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುನಗುಂದ ಪುರಸಭೆ ಚುನಾವಣೆ: ಭಾಗ್ಯಶ್ರೀ ರೇವಡಿ ಅಧ್ಯಕ್ಷೆ

Published : 27 ಆಗಸ್ಟ್ 2024, 14:13 IST
Last Updated : 27 ಆಗಸ್ಟ್ 2024, 14:13 IST
ಫಾಲೋ ಮಾಡಿ
Comments

ಹುನಗುಂದ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಭಾಗ್ಯಶ್ರೀ ಬಸವರಾಜ ರೇವಡಿ ಹಾಗೂ ಉಪಾಧ್ಯಕ್ಷರಾಗಿ ರಾಜವ್ವ ಹನಮಪ್ಪ ಬಾದಾಮಿ ಮಂಗಳವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ, ತಹಶೀಲ್ದಾರ್‌ ನಿಂಗಪ್ಪ ಬಿರಾದಾರ ಘೋಷಣೆ ಮಾಡಿದರು.

ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು, ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾಗ್ಯಶ್ರೀ ರೇವಡಿ ಕಾಂಗ್ರೆಸ್‌ನ 12 ಮತ, ಬಿಜೆಪಿಯ ಒಬ್ಬರು, ಜೆಡಿಎಸ್‌ನ ಇಬ್ಬರು ಹಾಗೂ ಶಾಸಕರ ಒಂದು ಮತ ಸೇರಿ ಒಟ್ಟು 16 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಬಿಜೆಪಿಯ ಬಸವ್ವ ಬಸಪ್ಪ ಚಿತ್ತಾವಾಡಗಿ ಅವರು 8 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ಇಲ್ಲದಿರುವುದರಿಂದ ಕಾಂಗ್ರೆಸ್‌ನಿಂದ ರಾಜವ್ವ ಹನುಮಪ್ಪ ಬಾದಾಮಿ ಅವಿರೋಧವಾಗಿ ಆಯ್ಕೆಯಾದರು.

ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿದರು. ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ತಿನ್ನಿಸಿ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಪುರಸಭೆ ಮಾಜಿ ಅಧ್ಯಕ್ಷ ಶರಣು ಬೆಲ್ಲದ, ಸಂಗಣ್ಣ ಗಂಜೀಹಾಳ, ಮುತ್ತಣ್ಣ ಕಲಗೋಡಿ, ರವಿ ಹುಚನೂರ, ಅಮರೇಶ ನಾಗೂರ, ವಿಶ್ವನಾಥ ಬ್ಯಾಳಿ, ದೇವು ಡಂಬಳ, ಮಲ್ಲಣ್ಣ ಹೂಗಾರ, ಮುತ್ತು ಲೋಕಾಪುರ ಇದ್ದರು.

ಹುನಗುಂದ ಡಿವೈಎಸ್‌ಪಿ ವಿಶ್ವನಾಥ ಕುಲಕರ್ಣಿ ನೇತೃತ್ವದಲ್ಲಿ ಸಿಪಿಐ ಸುನೀಲ ಸವದಿ, ಪಿಎಸ್‌ಐಗಳಾದ ಚನ್ನಯ್ಯ ದೇವೂರ, ಎಸ್.ಆರ್. ನಾಯಕ ಹಾಗೂ ಇಳಕಲ್, ಅಮೀನಗಡ ಪಿಎಸ್ಐ ಪೊಲೀಸ್ ಬೀಗಿ ಬಂದೋಬಸ್ತ್ ಮಾಡಿದ್ದರು. ಪುರಸಭೆಯ ಎರಡು ರಸ್ತೆಗಳಿಗೆ ಬ್ಯಾರಿಕೇಡ್‌ ಅಳವಡಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT