ಹುನಗುಂದ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಬಹುತೇಕ ಬಂಕ್ಗಳು ಹಾಗೂ ನಗರದಲ್ಲಿರುವ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಅಭಾವ ಉಂಟಾಗಿದ್ದು, ವಾಹನ ಸವರಾರು ಪರದಾಡುವಂತಾಗಿದೆ.

ನಗರದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಹುತೇಕ ಬಂಕ್ಗಳು ಪೆಟ್ರೋಲ್ ಹಾಗೂ ಡೀಸೆಲ್ ಕೊರತೆಯಿಂದ ಬಂದ್ ಆಗಿವೆ. ಇನ್ನು ನಗರದಲ್ಲಿರುವ ಮೂರು ಬಂಕ್ಗಳಲ್ಲಿ ಎರಡು ಬಂಕ್ಗಳು ಬಂದ್ ಆಗಿದ್ದು, ಇನ್ನೊಂದು ಬಂಕ್ನಲ್ಲಿ ಕೇವಲ ಪೆಟ್ರೋಲ್ ಮಾತ್ರ ಲಭ್ಯವಿದೆ. ಉಳಿದ ನಾಗರಾಳ್ ಪೆಟ್ರೋಲ್ ಬಂಕ್ನಲ್ಲಿ ಸ್ವಲ್ಪಮಟ್ಟಿನ ಪೆಟ್ರೋಲ್ ಹಾಗೂ ಡೀಸೆಲ್ ಲಭ್ಯವಿದ್ದು, ಅಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ತುಂಬಿಸಿಕೊಳ್ಳಲು ವಾಹನ ಸವಾರಾರು ಮುಗಿಬಿದ್ದ ದೃಶ್ಯ ಕಂಡುಬಂದಿತು.

ನಾಗರಾಳ್ ಪೆಟ್ರೋಲ್ ಬಂಕ್ನಲ್ಲಿ ವಾಹನಗಳು ಸರತಿ ಸಾಲಿನಲ್ಲಿ ಇಂಧನ ಪಡೆಯುವಂತ ಪರಿಸ್ಥಿತಿ ಉಂಟಾಗಿದೆ. ಒಂದು ವಾಹನಕ್ಕೆ ₹2 ಸಾವಿರ ಡೀಸೆಲ್ ಹಾಗೂ ದ್ವಿಚಕ್ರ ವಾಹನಗಳಿಗೆ ₹200 ವೆಚ್ಚದ ಪೆಟ್ರೋಲ್ ಮಾತ್ರ ಹಾಕಲಾಗುತ್ತಿದೆ.

ಪೆಟ್ರೋಲ್ ಅಭಾವ ಎಂಬ ಸುದ್ದಿ ಕೇಳಿ ಜನರು ದೊಡ್ಡ ಕ್ಯಾನ್ ಗಳು ಹಾಗೂ ಬಾಟಲ್ ಹಿಡಿದು ಸರತಿ ಸಾಲಿನಲ್ಲಿ ನಿಂತಿದ್ದರು. ತಾಲ್ಲೂಕಿನಲ್ಲಿ ಟ್ರ್ಯಾಕ್ಟರ್ ಮೂಲಕ ಬಹುತೇಕ ರೈತರು ಮುಂಗಾರು ಬಿತ್ತನೆಗೆ ಹೊಲಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಬಂಕ್ ಮುಂದೆ ಟ್ರ್ಯಾಕ್ಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ನಿಂತಿರುವುದು ಕಂಡುಬಂತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-19-1216590274

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.