ಹುನಗುಂದ: ‘ಧರ್ಮವೆಂದರೆ ಇತರರಿಗೆ ಒಳಿತನ್ನು ಬಯಸುವುದು ಎಂದರ್ಥ. ಧರ್ಮ ಎನ್ನುವ ಪದಕ್ಕೆ ವಿವಿಧ ಹೆಸರನ್ನು ಇಟ್ಟು ವ್ಯಾಖ್ಯಾನಿಸುವಲ್ಲಿ ವಿಮರ್ಶಿಸುವಲ್ಲಿ ನಾವು ಎಡವುತ್ತಿದ್ದೇವೆ’ ಎಂದು ನಿವೃತ್ತ ಶಿಕ್ಷಕ ವಿಜಯ ಮಹಾಂತೇಶ ಗದ್ದನಕೇರಿ ಹೇಳಿದರು.

ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ 426ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ನಾವು ಹೆಸರಿಸಿದ ಎಲ್ಲ ಧರ್ಮಗಳ ಬೋಧನೆಯ ಸಾರ ಒಂದೇಯಾಗಿದೆ. ವಿಭಜನೆಯನ್ನು ಯಾವ ಧರ್ಮವೂ ಪ್ರೋತ್ಸಾಹಿಸುವುದಿಲ್ಲ. ಜೋಡಣೆ ಎಲ್ಲ ಧರ್ಮಗಳ ಸತ್ವವಾಗಿದೆ. ಮುಖ್ಯವಾಗಿ ನಮ್ಮ ಆಚಾರ ವಿಚಾರ ನಡವಳಿಕೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸಬೇಕೆ ಹೊರತು ವೇಷ ಭೂಷಣ, ಸಾಂಪ್ರದಾಯಿಕ ಲಾಂಛನಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸಬಾರದು’ ಎಂದರು.

ನಿವೃತ್ತ ಉಪನ್ಯಾಸಕ ನಾಗರಾಜ ನಾಡಗೌಡ ಪ್ರಾಸ್ತಾವಿಕ ಮಾತನಾಡಿ, ‘ದ್ವೇಷ, ಅಸೂಯೆಗಳಿಲ್ಲದ ಪಾರದರ್ಶಕ ಬದುಕು ನಮ್ಮದಾಗಬೇಕು. ತೀರ್ಥಯಾತ್ರೆ, ಪಾದಯಾತ್ರೆಗಳಿಗಿಂತ ದೃಢ ಭಕ್ತಿಯ ಪ್ರಾರ್ಥನೆಯಿಂದ ದೇವನೊಲುಮೆ ನಮಗಾಗುತ್ತದೆ’ ಎಂದು ತಿಳಿಸಿದರು.

ಪುರ್ತಗೇರಿ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟಿಗಳಾದ ಎಂ.ಎಸ್ ಮಠ, ಬಸಯ್ಯ ನವಲಿಮಠ, ಭರಮ ಗೌಡರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-1921790952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.