ಹುನಗುಂದ: ನಗರದಲ್ಲಿ ಮಂಗಳವಾರ ಸಂಜೆ ಒಂದು ತಾಸು ಧಾರಾಕಾರ ಮಳೆ ಸುರಿಯಿತು. ಗಾಳಿ, ಗುಡುಗು–ಸಿಡಿಲಿನ ಆರ್ಭಟ ಜೋರಾಗಿತ್ತು. ರಾತ್ರಿ ಜಿಟಿ ಜಿಟಿ ಮಳೆ ಮುಂದುವರೆಯಿತು.

ಗಾಳಿ ರಭಸಕ್ಕೆ ಬಸ್ನಿಲ್ದಾಣ ಹತ್ತಿರದ ಹೋಟೆಲ್ವೊಂದರ ತಗಡಿನ ಶೀಟ್ಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಎರಡು ಕಂಬಗಳು ಧರೆಗೆ ಉರುಳಿದವು. ವಿದ್ಯುತ್ ಸಂಪರ್ಕ ಕಡಿತವಾದ್ದರಿಂದ ಭಾರಿ ಅನಾಹುತ ತಪ್ಪಿತು. ತಗಡಿನ ಶೀಟ್ ಹಾಗೂ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ನಾಲ್ಕು ಬೈಕ್ಗಳು ಜಖಂಗೊಂಡವು.

ಹೊಸಪೇಟೆ–ವಿಜಯಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಳವಡಿಸಿದ್ದ ವಿವಿಧ ನಗರಗಳ ಅಂತರ ತಿಳಿಸುವ ನಾಮಫಲಕ ಉರುಳಿದೆ. ಇದರಿಂದ ಕೆಲ ಸಮಯ ವಾಹನಗಳ ಸಂಚಾರ ಸ್ಥಗಿತವಾಯಿತು. ಮಲ್ಲಿಕಾರ್ಜುನ ಬಡಾವಣೆ ಸೇರಿದಂತೆ ಇತರೆಡೆ 10ಕ್ಕೂ ಹೆಚ್ಚು ಗಿಡ–ಮರಗಳು ಧರಾಶಾಹಿಯಾದವು. ವಿವಿಧೆಡೆ ಮರದ ಟೊಂಗೆಗಳು ಮುರಿದುಬಿದ್ದಿವೆ.

ವಿದ್ಯುತ್ ಕಂಬ, ಮರದ ಟೊಂಗೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿವೆ. ನಗರ, ಗ್ರಾಮೀಣ ಪ್ರದೇಶಗಳಲ್ಲೂ 4–5 ಕಂಬಗಳು ಧರಗೆ ಉರುಳಿ, ವಿದ್ಯುತ್ ವ್ಯತ್ಯಯ ಉಂಟಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-19-266617505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.