ಹುನಗುಂದ: ಈ ಬಾರಿ ತಾಲ್ಲೂಕಿನಾದ್ಯಂತ ಮುಂಗಾರು ಪೂರ್ವ ಮಳೆ ನಿರೀಕ್ಷೆಯಂತೆ ಸುರಿಯದ ಪರಿಣಾಮ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿವೆ, ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡುವಂತಾಗಿದೆ.

ಪ್ರತಿ ವರ್ಷ ಈ ಸಮಯದಲ್ಲಿ ಮುಂಗಾರು ಪೂರ್ವ ಮಳೆಯಾಗಿ ಕೃಷಿ ಚಟುವಟಿಕೆ ಚುರುಕುಗೊಂಡು ರೈತ ಸಮುದಾಯ ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಅಣಿಯಾಗುತ್ತಿತ್ತು. ಪ್ರಮುಖವಾಗಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಹೆಸರು, ಸೂರ್ಯಕಾಂತಿ, ಮೆಣಸಿನಕಾಯಿ, ಉಳ್ಳಾಗಡ್ಡಿ, ಗೋವಿನ ಜೋಳ, ತೊಗರಿ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗುತ್ತದೆ.

ಹೆಸರು ಬಿತ್ತನೆಗೆ ಹಿನ್ನಡೆ: ಮುಂಗಾರು ಪೂರ್ವದ ಜೊತೆಗೆ ಮುಂಗಾರು ಮಳೆ ಉತ್ತಮವಾಗಿ ಸುರಿದು ಭೂಮಿ ತೇವಾಂಶದಿಂದ ಕೂಡಿದ್ದರೆ ಹೆಸರು ಬಿತ್ತನೆ ಮಾಡಲು ಪ್ರಶಸ್ತ ಸಮಯ. ರೋಹಿಣಿ ಮಳೆಯ ಆರಂಭದಲ್ಲಿ ಹೆಸರು ಬಿತ್ತನೆ ಮಾಡಬೇಕಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಭೂಮಿಯನ್ನು ಹದಗೊಳಿಸಿಲ್ಲ. ಹೀಗಾಗಿ ಹೆಸರು ಬಿತ್ತನೆಗೆ ಹಿನ್ನಡೆಯಾಗಿದೆ.

ಕಳೆದ ಬಾರಿ ಇದೇ ಸಮಯದಲ್ಲಿ ಉತ್ತಮವಾಗಿ ಮುಂಗಾರು ಪೂರ್ವ ಮಳೆಯಾಗಿದ್ದರಿಂದ ತಾಲ್ಲೂಕಿನಾದ್ಯಂತ ಪೂರ್ಣ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಉತ್ತಮ ಮಳೆಯಿಂದಾಗಿ ಸೂರ್ಯಕಾಂತಿ ಉತ್ತಮ ಇಳುವರಿ ಬಂದಿತ್ತು. ಈಗ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಅಗತ್ಯ ಪ್ರಮಾಣದ ಬೀಜ ಮತ್ತು ಗೊಬ್ಬರ ಲಭ್ಯ: ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಅನುಗುಣವಾಗಿ ಹುನಗುಂದ, ಅಮೀನಗಡ, ಕರಡಿ ಹಾಗೂ ಇಳಕಲ್ ಹೋಬಳಿ ವ್ಯಾಪ್ತಿಯಲ್ಲಿ ಗೋವಿನ ಜೋಳ 64.32 ಕ್ವಿಂಟಲ್, ಸಜ್ಜೆ 7.65 ಕ್ವಿಂಟಲ್, ಸೂರ್ಯಕಾಂತಿ 5.10 ಕ್ವಿಂಟಲ್ ತೊಗರಿ 273 ಕ್ವಿಂಟಲ್, ಹೆಸರು 24.60 ಕ್ವಿಂಟಲ್ ಸೇರಿದಂತೆ ಒಟ್ಟು 374.67 ಕ್ವಿಂಟಲ್ ಬೀಜ ಮತ್ತು ಯೂರಿಯಾ 485 ಮೆಟ್ರಿಕ್ ಟನ್, ಡಿಎಪಿ 219 ಮೆಟ್ರಿಕ್ ಟನ್, ಎಂಒಪಿ 97.35 ಮೆಟ್ರಿಕ್ ಟನ್, ಎಸ್ ಎಸ್ ಪಿ. 78.3 ಮೆಟ್ರಿಕ್ ಟನ್ ಹಾಗೂ ಎನ್ಪಿಕೆಎಸ್ ಕಾಂಪ್ಲೆಕ್ಸ್ 691 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 1,571 ಮೆಟ್ರಿಕ್ ಟನ್ ಗೊಬ್ಬರವನ್ನು ಸಂಗ್ರಹ ಮಾಡಿಕೊಂಡಿದೆ.

ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ: ವಾಡಿಕೆಯಂತೆ ತಾಲ್ಲೂಕಿನಲ್ಲಿ 62.1 ಮಿ ಮೀ ಮಳೆಯಾಗಬೇಕಿತ್ತು. ಆದರೆ, ಈವರೆಗೆ ಕೇವಲ 48.6 ಮಿ.ಮೀ ಮಾತ್ರ ಮಳೆಯಾಗಿದೆ. ಹುನಗುಂದ ಹೋಬಳಿ ವ್ಯಾಪ್ತಿಯಲ್ಲಿ ಶೇ 32ರಷ್ಟು ಕೊರತೆ ಆಗಿದೆ. ಹೀಗಾಗಿ ಈ ಬಾರಿ ಮುಂಗಾರು ಹಂಗಾಮು ರಾಜ್ಯಕ್ಕೆ ಒಂದು ವಾರ ಕಾಲ ತಡವಾಗಿ ಆಗಮಿಸುವುದರಿಂದ ರೈತರನ್ನು ಚಿಂತೆಗೀಡು ಮಾಡಿದೆ.

ಎಲ್ ನಿನೋ ಹಾಗೂ ಭಾರತೀಯ ಹವಾಮಾನ ವರದಿ ಪ್ರಕಾರ ಈ ಬಾರಿ ಮುಂಗಾರು ಮಳೆ ಆಶಾದಾಯಕವಾಗಿಲ್ಲ. ರೈತರು ತೊಗರಿ, ಸಜ್ಜೆ ಹಾಗೂ ನವಣೆಯಂತಹ ಬರ ನಿರೋಧಕ ಬೆಳೆ ಬೆಳೆಯಲು ಮುಂದಾಗಬೇಕು.
–ಸೋಮಲಿಂಗಪ್ಪ ಅಂಟರಠಾಣಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹುನಗುಂದ

ಕಳೆದ ವರ್ಷ ಈ ಸಮಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಈವರೆಗೂ ಹದ ಮಳೆಯಾಗಿಲ್ಲ. ಹೆಸರು ಬಿತ್ತನೆಗೆ ಬೀಜ ಸಂಗ್ರಹಿಸಿದ್ದೇನೆ.
–ಸಂಗನಗೌಡ ಭಾವಿಕಟ್ಟಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.